ಸಾಹಿತ್ಯ ಸಂಸ್ಕೃತಿಯ ಕೊಡುಗೆಗೆ ಕ.ಸಾ.ಪ ಶ್ರಮಿಸುತ್ತಿದೆ ಅಮರೇಗೌಡ ಪಾಟೀಲ

ಗಂಗಾವತಿ :- ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಮೊದಲಿನಿಂದಲು ಹೋರಾಟ ಮಾಡುತ್ತಾ ಬಂದಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಮರೇಗೌಡ ಪಾಟೀಲ ಹೇಳಿದರು. 
ತಾಲೂಕಿನ ವೆಂಕಟಗಿರಿ ಹೋಬಳಿ ಕ.ಸಾ.ಪ ಉದ್ಘಾಟನೆಯನ್ನು ಬಸವಪಟ್ಟಣದ ನಂಜುಡೆಶ್ವರ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯ ಪರಿಷತ್ತ ನೆಲ, ಜಲ, ಭಾಷೆಗೆ ಹೋರಾಟ ಮಾಡುತ್ತಾ ಬಂದರು ಸಹಿತ ಸಾಹಿತ್ಯ ಹಾಗೂ ಜನಪದ ಸಂಸ್ಕೃತಿಯ ಉತ್ಕೃಷ್ಟತೆಗೆ ಶ್ರಮಿಸುತ್ತಿರುವುದು ಶ್ಲಾಘನಿಯ ಎಂದರು.   
ಸಿದ್ದಾರಮಯ್ಯ ಗುರುವಿನ ಸಾನಿಧ್ಯವನ್ನು ವಹಿಸಿದ್ದರು. ತಾಲೂಕ ಕ.ಸಾ.ಪ ಅಧ್ಯಕ್ಷ ಅಜ್ಮೀರ ನಂದಾಪೂರ ಅಧ್ಯಕ್ಷತೆಯನ್ನು ವಹಿಸಿದ್ದರು. ನಿಂಜಲಿಂಗಪ್ಪ ಮೇಣಸಗಿ ಜನಪದ ಸಾಹಿತ್ಯದಲ್ಲಿ ಗ್ರಾಮೀಣ ಬದುಕು  ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 
ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಣ್ಣ ನಿಂಗೋಜಿ, ತಾ.ಪಂ. ಅಧ್ಯಕ್ಷ ಶರಣೆಗೌಡ ಪೋ.ಪಾಟೀಲ, ಎಮ್.ಎಸ್.ಪಾಟೀಲ, ಇನ್ನಿತರರು ಮಾತನಾಡಿದರು. ಡಾ. ಅಬ್ದುಲ ರಹೆಮಾನ , ಕರವಿರನಗೌಡ ವೆಂಕಟಗಿರಿ ಹೋಬಳಿ ಕ.ಸಾ.ಪ ಅಧ್ಯಕ್ಷರಾದ ರಘುನಾಥ ಸಂಗಳದ ಹಾಗೂ ರುದ್ರೇಶ ಬಳ್ಳಾರಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. 
ತಾಲೂಕ ಕ.ಸಾ.ಪ ಗೌರವಕಾರ್ಯದರ್ಶಿ ಮಲ್ಲಪ್ಪ ಒಡೆಯರ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಆರ್ ಸತೀಶ ನಿರೂಪಿಸಿದರು. ಶ್ರೀನಿವಾಸ ಅಂಗಡಿ ಸ್ವಾಗತಿಸಿದರು. ಫರೀದಾ ಬೇಗಂ ವಂದಿಸಿದರು.   

Leave a Reply