ಬೀಳ್ಕೊಡಿಗೆ.

ಕೊಪ್ಪಳ-30- ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಗ್ರಂಥಾಲಯದ ಸಹಾಯಕರಾಗಿ ೩೮ ವರ್ಷಗಳ ಸುಧೀರ್ಘ ಸೇವೆಸಲ್ಲಿಸುತ್ತಿದ್ದ ಗವಿಯಪ್ಪ ಕೊಪ್ಪಳ ಇವರು ಸೇವೆಯಿಂದ ನಿವೃತ್ತಿಗೊಂಡರು. ಇದರ ಅಂಗವಾಗಿ ಮಹಾವಿದ್ಯಾಲಯದ ವತಿಯಿಂದ  ಸಭಾಭವನದಲ್ಲಿ ಬೀಳ್ಕೊಡಿಗೆ  ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆಡಳಿತಾಧಿಕಾರಿ ಡಾ.ಮರೇಗೌಡ, ಉಪನ್ಯಾಸಕರಾದ ಡಾ.ದಯಾನಂದಸಾಳಂಕಿ, ಶರಣಬಸಪ್ಪ ಬಿಳಿಯಲಿ, ಎಂ.ಎಸ್ ಬಾಚಲಾಪುರ, ಎಸ್.ಬಿ ಹಿರೇಮಠ, ಸಿ.ವಿ ಕಲ್ಮಠ, ಡಾ.ಪ್ರಕಾಶಬಳ್ಳಾರಿ,ಶಶಿಧರಕೊತಬಾಳ, ನೀತೂಸಿಂಗ್ ನಿವೃತ್ತಿಯಾದ ಗವಿಯಪ್ಪ ಕೊಪ್ಪಳ ಅವರ ಸೇವಾಕೈಂಕರ್ಯ ಕುರಿತು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಗವಿಯಪ್ಪ ಕೊಪ್ಪಳ  ಮಾತನಾಡಿ  ವಿದ್ಯಾರ್ಥಿಗಳು ಬಯಸಿದ ಪುಸ್ತಕಗಳನ್ನು  ಗ್ರಂಥಾಲಯದಲ್ಲಿ ಹುಡುಕಿ ಕೊಡುವದೇ ನನ್ನ ಕಾಯಕವಾಗಿತ್ತು. ಕಾಯಕದಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಪರಿಶ್ರಮ ರೂಢಿಸಿಕೊಂಡಿದ್ದರಿಂದಲೇ ನಾನು ನನ್ನ ಸೇವೆಯನ್ನು ಪರಿಪೂರ್ಣಗೊಳಿಸಿಕೊಳ್ಳಲು ಸಹಾಯವಾಯಿತು. ಈ ಅವಧಿಯಲ್ಲಿ ನನ್ನೊಂದಿಗೆ ಸಹಕರಿಸಿದ ಎಲ್ಲ ಸಿಬ್ಭಂಧಿಗಳಿಗೆ ನಾನು ಚಿರರುಣಿ ಎಂದರು. ಪ್ರಾಚಾರ್ಯ ಮನೋಹರದಾದ್ಮಿ ಮಾತನಾಡಿ ಸರಕಾರಿ ನಿಯಮಾನುಸಾರ ಸೇವೆಯಿಂದ ಬಿಡುಗಡೆಗೊಂಡ ಗವಿಸಿದ್ದಪ್ಪ ಕೊಪ್ಪಳ ಇವರು ಗ್ರಂಥಾಲಯದಲ್ಲಿ ಬಿಡುವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದರು.ಗ್ರಂಥಾಲಯಕ್ಕೆ ಬರುವವರನ್ನು  ಸದಾ ನಗುಮುಖದಿಂದಲೇ ಸ್ವಾಗತಿಸುತ್ತಾ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆಧ್ಯಯನಕ್ಕೆ ಬೇಕಾಗುವ ಪುಸ್ತಕಗಳನ್ನು ಬಹುಬೇಗನೆ ಒದಗಿಸುತ್ತಿದ್ದರು.  ಸದಾ ಹಸನ್ಮುಖಿಗಳಾಗಿ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಪಕರ ಪ್ರೀತಿಗೆ ಪಾತ್ರರಾಗಿದ್ದರೆಂದು ಮಾತನಾಡಿದರು. ಡಾ.ಬಸವರಾಜ ಪೂಜಾರ ನಿರೂಪಿಸಿದರು.
Please follow and like us:
error