ನಮೋ ಅಲೆಯಿಂದ ಲೋಕಸಭೆ ವ್ಯಾಪ್ತಿಯಲ್ಲಿ ಬಿಜೆಪಿಗೆ ವ್ಯಾಪಕ ಬೆಂಬಲ-ಸಂಗಣ್ಣ ಕರಡಿ

 ಈ ಬಾರಿ ದೇಶದ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯನ್ನು ಮಾಡುವ ಉದ್ದೇಶದಿಂದ ಕೊಪ್ಪಳ ಲೋಕಸಭೆಯ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷಕ್ಕೆ ವ್ಯಾಪಕ ಬೆಂಬಲದಿಂದ ಬಿಜೆಪಿ ಗೆಲುವು ಖಚಿತ ಎಂದು  ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ ಹೇಳಿದರು.
ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರು ಕೊಪ್ಪಳ ಲೋಕಸಭೆ ವ್ಯಾಪ್ತಿಯ ಕನಕಗಿರಿ,ನವಲಿ, ಬಳಗಾನೂರು,ಮಸ್ಕಿ, ತುರ್ವಿಹಾಳ ಮತದಾರರನ್ನು  ಉದ್ದೇಶಿಸಿ ಮಾತನಾಡಿ ದೇಶದ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯನ್ನು ಆಯ್ಕೆಗೊಳಿಸಲು ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ,ಬಿಜೆಪಿ ಎಲ್ಲಾ ವರ್ಗದವರ ಹಿತ ಕಾಯುವ ಪಕ್ಷವಾಗಿದ್ದು, ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ನೇತೃತ್ವದ ಸರಕಾರ ಅನೇಕ ಜನಪರ ಕಾರ‍್ಯಕ್ರಮಗಳನ್ನು ಜಾರಿಗೆ ತಂದಿದ್ದು ಜನತೆ ಮರೆತಿಲ್ಲ, ಸಧೃಡ ರಾಷ್ಟ್ರ ನಿರ್ಮಾಣಕ್ಕೆ ನರೇಂದ್ರ ಮೋದಿಯನ್ನು ಪ್ರಧಾನಿಯಾಗಲು ಇಡೀ ರಾಷ್ಟ್ರವೇ ನರೇಂದ್ರ ಮೋದಿಯನ್ನು ಬೆಂಬಲಿಸುತ್ತಿದೆ, ಅದರಲ್ಲಿ ಇಡೀ ಯುವ ಸಮುದಾಯವೇ ನಮೋ ಪರವಾಗಿರುವುದರಿಂದ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೊಪ್ಪಳ ಲೋಕಸಭೆ ಉಸ್ತುವಾರಿ ಎಚ್.ಗಿರೇಗೌಡ, ಮುಖಂಡರಾದ ಬಸವರಾಜ್ ದಡೇಸೂಗುರು, ನಕ್ಕಂಟಿ ನಾಗರಾಜ್, ಮುಕುಂದರಾವ್ ಭವಾನಿಮಠ, ಕೊಲ್ಲಾ ಶೇಷಗಿರಿರಾವ್,ನಾಗರಾಜ್ ಬಿಲ್ಗಾರ್, ಬೂದಿರಡ್ಡೇಪ್ಪ ನಾಯಕ, ಡಿ.ಶ್ರೀನಿವಾಸ, ಡಿ.ತಿಮ್ಮಪ್ಪ, ಪಂಪನಗೌಡ ಪೋ.ಪಾಟೀಲ್, ನರಸಿಂಗರಾವ್ ಕುಲಕರ್ಣಿ ಪಕ್ಷದ ಪದಾಧಿಕಾರಿಗಳು ಕಾರ‍್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

Leave a Reply