ಗವಿಮಠದ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ಶಿಕ್ಷಕರು ವಿನಂತಿ

ಕೊಪ್ಪಳ :- ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವತಿಯಿಂದ ಪ್ರತಿ ಸೋಮವಾರ ಸಂಜೆ ೬:೩೦ ರಿಂದ ೭:೩೦ ರವರೆಗೆ ಭಜನಾ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮವು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಸಂಗೀತಾಸಕ್ತರು ಭಾಗವಹಿಸುತಿದ್ದಾರೆ ಈ ಭಜನಾ ಮತ್ತು ಧ್ಯಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಭಾಗವಹಿಸಲು ಗವಿಮಠದ  ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ಶಿಕ್ಷಕರು ವಿನಂತಿಸಿದ್ದಾರೆ.
Please follow and like us:
error