ಬೆಳಕ ಹೆಜ್ಜೆಯನರಸಿ….

ಆನೆಗುಂದಿ : ಕವಿ ವಿ.ಹರಿನಾಥಬಾಬು ರವರ ಬೆಳಕ ಹೆಜ್ಜೆಯನರಸಿ ಕವನ ಸಂಕಲನದ ಬಗ್ಗೆ ಸ್ನೇಹಿತರ ಬಳಗದ ಜೊತೆ ಒಂದು ಸಂವಾದ ಕಾರ್ಯಕ್ರಮವನ್ನು ಆನೆಗುಂದಿಯ ಹುಚ್ಚಪ್ಪಯ್ಯನಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೂಟದಲ್ಲಿ ಭಾಗವಹಿಸಿದ್ದ ಸ್ನೇಹಿತರು ಕವನಗಳ ಬಗ್ಗೆ ಮನಬಿಚ್ಚಿ ವಿಶ್ಲೇಷಣೆ ಮಾಡಿದರೆ , ಕವಿ ಹರಿ ನಾಥಬಾಬು ಕವನ ಹುಟ್ಟಿದ ಸಮಯದ ಬಗ್ಗೆ ಮಾತನಾಡಿದರು. ರಮೇಶ ಗಬ್ಬೂರ್, ನಿರಂಜನ, ಚಂದ್ರು ತುರುವಿಹಾಳ,ಕಣಗಲಿನಾಥ ಗುಡದೂರ ,ಶಿಕಾಬಡಿಗೇರ ಸೇರಿದಂತೆ ಪ್ರತಿಯೊಬ್ಬರು ತಮಗಿಷ್ಟವಾದ ಕವನ ವಾಚನದ ಮೂಲಕ ಆಯಾ ಕವನಗಳ ಬಗ್ಗೆ ಮಾತನಾಡಿದರು.
ಪ್ರಕಾಶಕ ವೆಂಕಟೇಶ್, ಹಂಪಿ ವಿವಿಯ ಸುಜ್ಞಾನಮೂರ್ತಿ,ಲಿಂಗಾರಡ್ಡಿ, ಮಹೇಶ್,ರಮೇಶ,ಸಿರಾಜ್ ಬಿಸರಳ್ಳಿ ಇನ್ನಿತರ ಸ್ನೇಹಿತರು ಉಪಸ್ಥಿತರಿದ್ದರು.
Please follow and like us:

Related posts

Leave a Comment