ವಚನಗಳು ಮನುಷ್ಯನ ಅಂತರಂಗಕ್ಕೆ ಬೆಳಕು ನೀಡುತ್ತವೆ-ಗವಿಶ್ರೀಗಳು

 ಕೊಪ್ಪಳ, ೨೫- ವಚನಗಳು ಮನುಷ್ಯನ ಅಂತರಂಗಕ್ಕೆ ಬೆಳಕು ನೀಡುತ್ತವೆ ಎಂದು ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಕೋಟೆ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ವಚನಶ್ರಾವಣ  ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ನಾವು ಮನೆಯಲ್ಲಿ ದಿನ ಬೀಳುವ ಕಸವನ್ನು ಹೇಗೆ ಸ್ವಚ್ಚತೆಗೊಳಿಸುತ್ತೇವೆಯೇ ಹಾಗೆ ನಮ್ಮ ಮನಸ್ಸಿನ ಕಸ ಸ್ವಚ್ಚಗೊಳಿಸಲು ಶರಣರ ವಚನಗಳ ನಮಗೆ ದಾರಿದೀಪಗಳಾಗಿವೆ ಎಂದರು.
ಮನುಷ್ಯನ ಮನಸ್ಸು ಬಹಳ ಸೂಕ್ಷ್ಮವಾದದ್ದು ಅದಕ್ಕೆ ನಾವು ಸಕರಾತ್ಮಕ ಚಿಂತನೆಗಳನ್ನು ಮಾಡುವದರ ಮೂಲಕ ನಮ್ಮ ಮನಸ್ಸುನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ನುಡಿದರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಸಂಗಣ್ಣ ಕರಡಿ, ಇಂದಿನ ಕಾಲಮಾನದಲ್ಲಿ ಕಾಯಕ ಮಾಡಿ ಜೀವನ ಸಾಗಿಸುವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಾಯಕ ಮಾಡುವದರಿಂದ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ ಅದಕ್ಕೆ ಶರಣರು ನಮ್ಮ ಮುಂದೆ ಸಾಧಿಸಿ ತೋರಿಸಿ ಮಾದರಿ ಬಿಟ್ಟು ಹೋಗಿದ್ದಾರೆ. ನಾವೆಲ್ಲರೂ ಕಾಯಕ, ದಾಸೋಹ ಪರಂಪರೆಯನ್ನು ಮುಂದುವರೆಸುವ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ನೀಲಕಂಠಯ್ಯ ಹಿರೇಮಠ ವಹಿಸಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕ ಶರಣಬಸವ ಬಿಳಿಎಲೆ, ಶ್ರೀಮತಿ ಸಂಗಮ್ಮ ಗುರುಸಿದ್ದಪ್ಪ ಸಂಕ್ಲಾಪೂರ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮ ನಿರೂಪಣೆ ಹನುಮೇಶ ಕಲ್ಮಂಗಿ, ಸ್ವಾಗತ ಗವಿಸಿದ್ದಪ್ಪ ಪಲ್ಲೇದ, ವಂದನಾರ್ಪಣೆಯನ್ನು ದಾನಪ್ಪ ಶೆಟ್ಟರ ಮಾಡಿದರು.
ವಚನ ಶ್ರಾವಣ ಸಮರೋಪ ಸಮಾರಂಭ
ಕೊಪ್ಪಳ, ಲಿಂಗಾಯತ ಪ್ರಗತಿಶೀಲ ಸಂಘ, ಮಹೇಶ್ವರ ಸೇವಾ ಸಮಿತಿ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ ಕೊಪ್ಪಳ ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ ಸಮಾರೋಪ ಸಮಾರಂಭನ್ನು ಕಾರ್ಯಕ್ರಮವನ್ನು ಕೊಪ್ಪಳ ನಗರದ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಲ್ಲಿ ದಿ. ೨೬-೮-೨೦೧೪ ಮಂಗಳವಾರದಂದು ಸಂಜೆ ೬-೩೦ಕ್ಕೆ ಆಚರಿಸಲಾಗುವುದು.
ಅಧ್ಯಕ್ಷತೆಯನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಪ್ಪ ರಾಚಪ್ಪ ಶೆಟ್ಟರ ವಹಿಸುವರು. ಅತಿಥಿ ಉಪನ್ಯಾಸಕರಾಗಿ ಬಸವತತ್ವ ಅನುಭಾವಿಗಳು ಬಸವಯ್ಯ ಸಸಿಮಠ ಉಪನ್ಯಾಸ ನೀಡುವರು.. ದಾಸೋಹ ಸೇವೆಯನ್ನು ಭವಾನಿಸಿಂಗ್ ಮುದಗಲ್ಲಕರ್ ವಹಿಸಿಕೊಂಡಿದ್ದಾರೆ.
  ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ   ತಿಳಿಸಿದ್ದಾರೆ.
Please follow and like us:
error