ಕೇಂದ್ರ ಸರ್ಕಾರಿ ಸ್ಟ್ಯಾಂಡಿಗ್ ಕೌನ್ಸಿಲರನ್ನಾಗಿ ಕೊಪ್ಪಳದ ನ್ಯಾಯವಾದಿಗಳಾದ .ಕೆ.ಮುರಳಿಧರ

ಮೊಟ್ಟ ಮೊದಲ ಭಾರಿಗೆ ಭಾರತ ಸರ್ಕಾರದಿಂದ ಕೊಪ್ಪಳ ಜಿಲ್ಲೆ ಕೇಂದ್ರ ಸರ್ಕಾರಿ ಸ್ಟ್ಯಾಂಡಿಗ್ ಕೌನ್ಸಿಲರನ್ನಾಗಿ ಕೊಪ್ಪಳದ ಹಿರಿಯ ಮತ್ತು ಅನುಭವಿ ನ್ಯಾಯವಾದಿಗಳಾದ .ಕೆ.ಮುರಳಿಧರ ಇವರನ್ನು ಹಾಗೂ ನ್ಯಾಯವಾದಿಗಳಾದ ಬಸವರಾಜ ಹಿರೇಮಠ ಮತ್ತು ಗಂಗಾವತಿಯ  ಸುಬಾಷ.ಎಸ್ ಇವರನ್ನು ನೇಮಕ ಮಾಡಿ ಆದೇಶದ ಸಂಖ್ಯೆ: F.NO.J-11015/2/2016-Judi  ದಿ: ೦೨/೦೩/೨೦೧೬ ರಂದು  ಸುರೇಶ ಚಂದ್ರ ಜಂಟಿ ಕಾರ್ಯದರ್ಶಿಗಳು ಮತ್ತು ಕಾನೂನು ಸಲಹೆಗಾರರು ಕೇಂದ್ರ  ಕಾನೂನು ಮತ್ತು ನ್ಯಾಯ ಸಚಿವಾಲಯ ದೆಹಲಿ ಆದೇಶ ಹೊರಡಿಸಿ, ಈ ಆದೇಶವು ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ ಎಂದು ಕೊಪ್ಪಳ ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ತಿಳಿಸಿದ್ದಾರೆ.

Please follow and like us:
error