ಭೌತಿಕ ಸಾಹಿತ್ಯ ಬೆಳಕಿಗೆ ತಂದವರು ವಚನ ಪಿತಾಮಹಅದನ್ನು ಬೌದ್ಧಿಕ ಸಾಹಿತ್ಯವನ್ನಾಗಿಸಿದವರು ಪ್ರವಚನ ಪಿತಾಮಹ -ರಾಜೇಶ ಸಸಿಮಠ.

ಗಂಗಾವತಿ-೧೫ ತೋಂಟದ ಸಿದ್ದಲಿಂಗ ಯತಿಗಳ ನಂತರ ಗುಪ್ತಗಾಮಿನಿಯಂತೆ ಭೌತಿಕವಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು ವಚನ ಪಿತಾಮಹ, ಪ.ಗು.ಹಳಕಟ್ಟಿಯವರಾದರೆ, ಅದನ್ನು ಬೌದ್ಧಿಕ ಸಾಹಿತ್ಯವನ್ನಾಗಿಸಿದವರು ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದಸ್ವಾಮಿಗಳು ಎಂದು ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್‌ನ ಕಾರ್ಯದರ್ಶಿ ರಾಜೇಶ ಬಿ. ಸಸಿಮಠ ಇವರು ಅಭಿಪ್ರಾಯಪಟ್ಟರು. ಅವರು ಸ್ಥಳೀಯ ಬಸವಕೇಂದ್ರವು ಬಸವಣ್ಣ ವೃತ್ತದಲ್ಲಿಯ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಶರಣಸಂಗಮ  ಕಾರ್ಯಕ್ರಮದಲ್ಲಿ ವಿಷಯ ಕುರಿತು ಅನುಭಾವ ನೀಡಿದರು. ಮುಂದುವರೆದು ತತ್ವನಿಷ್ಠೆಯ ಅನುಯಾಯಿಗಳಿಂದ ಯಾವುದೇ ಧರ್ಮ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ ಅದನ್ನು ನಾವು ಇಸ್ಲಾಂ, ಕ್ರೈಸ್ತ, ಬೌದ್ಧ, ಸಿಖ್ ಧರ್ಮಗಳಲ್ಲಿ ನೋಡಬಹುದು. ಮೌಲ್ಯದಲ್ಲಿ ಬಹಳಷ್ಟು ಪ್ರಗತಿಪರ ವಿಚಾರಗಳನ್ನು ಒಳಗೊಂಡರು ಇಂ

ದು ಬಸವಣ್ಣನ ಧರ್ಮ ೪-೫ ರಾಜ್ಯಗಳನ್ನು ಬಿಟ್ಟು ಬೆಳೆಯಲಾರದ್ದಕ್ಕೆ ಕಾರಣ ನಿಷ್ಠಾವಂತ ಅನುಯಾಯಿಗಳ ಕೊರತೆಯಿಂದ. ಕೆಲವರನ್ನು ಹೊರತುಪಡಿಸಿ ಎಲ್ಲಾ ಆಚರಣೆಗಳನ್ನು ಮಾಡುವವರು ಬಸವಾನುಯಾಯಿಗಳೆನ್ನುವಂತಾಗಿದೆ ಎಂದು ನಿಷ್ಠುರವಾಗಿ ಮಾತನಾಡಿದ ಅವರ ವಾಗ್ಜರಿಗೆ ಸಭೆಯು ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ಉದ್ಘಾಟನಾ ಭಾಷಣ ಮಾಡಿದ ನಗರದ ಖ್ಯಾತ ವೈದ್ಯರಾದ ಡಾ|| ವಿ.ಎ.ಪಾಟೀಲರು, ಲಿಂಗಾನಂದ ಸ್ವಾಮಿಗಳ ಪೂರ್ವಾಶ್ರಮದ ಕುರಿತು ಪರಿಚಯಿಸುತ್ತಾ ಅವರ ಪ್ರವಚನದ ವಿಷಯಗಳ ಬಗ್ಗೆ ಮಾತನಾಡಿದರು. ನಗರಸಭೆ ಸದಸ್ಯರಾದ ಶಾಂತವೀರಪ್ಪ ಸಿದ್ದಾಪುರ ಇವರು ಮಾತನಾಡಿ ವಚನಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಪಾಲಕರಿಂದ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.  ಅಧ್ಯಕ್ಷತೆ ವಹಿಸಿದ್ದ ಬಸವಕೇಂದ್ರದ ಕೆ.ಬಸವರಾಜ ಇವರು ಲಿಂಗಾನಂದ ಸ್ವಾಮಿಗಳ ಪ್ರವಚನದ ವೈಖರಿಯನ್ನು ಸಭೆಗೆ ತಿಳಿಸಿಕೊಟ್ಟರು. ಪೋಗೋ ಕಿಡ್ಸ್‌ನ ಅಧ್ಯಕ್ಷರಾದ ರಾಮಕೃಷ್ಣ ಇವರು ಆಯೋಜಿಸಿದ ಬಸವಣ್ಣ ಬಿತ್ತಿದ ಬೀಜಗಳು ನಾವು ಎನ್ನುವ ಮುರುಘಾ ಶರಣರ ಸಾಹಿತ್ಯಕ್ಕೆ ಚಿಕ್ಕ ಮಕ್ಕಳ ರೂಪಕ ಸಭೆಯನ್ನು ಮಂತ್ರಮುಗ್ಧರನ್ನಾಗಿಸಿತು.ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹೊಸಪೇಟೆ, ಕೊಪ್ಪಳ, ಯಲಬುರ್ಗಾ, ಮಸ್ಕಿ, ಬೆಂಗಳೂರಿನಿಂದಲೂ ಆಸಕ್ತರೂ ಆಗಮಿಸಿದ್ದು ವಿಶೇಷವಾಗಿತ್ತು. ವೀರೇಶ ಸುಳೇಕಲ್ ಹಾಗೂ ಮಾನ್ವಿಯ ಸುನೀತಾ ಇವರು ಪ್ರಾರ್ಥಿಸಿ, ಕವಿತಾಮಹೇಶಕುಮಾರ ವಂದಿಸಿದರು. ಕಾರ್ಯದರ್ಶಿ ಎ.ಕೆ.ಮಹೇಶಕುಮಾರ ಹಾಗೂ ಸೋಮು ಕುದುರಿಹಾಳ ಇವರ ಸಂಧರ್ಭೋಚಿತ ವಿವರಣೆಯ ನಿರೂಪಣೆ ಎಲ್ಲರಿಗೂ ಖುಷಿ ಕೊಟ್ಟು ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Related posts

Leave a Comment