ವಿಶ್ವ ಹಿರಿಯ ನಾಗರಿಕರ ದಿನಾಚರಣೆ ವಿವಿಧ ಸ್ಪರ್ಧೆಗಳು.

ಕೊಪ್ಪಳ, ಸೆ.೧೦
(ಕ ವಾ) ಕೊಪ್ಪಳ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ
ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಹಿರಿಯ
ನಾಗರಿಕರಿಗೆ ಕೊಪ್ಪಳದಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳನ್ನು
ಆಯೋಜಿಸಲಾಗಿದೆ.
     ಸೆ.೧೫ ರಂದು ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈ
ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ ೧೦ ಗಂಟೆಗೆ ಕ್ರೀಡಾ ಸ್ಪರ್ಧೆಗಳು
ಹಾಗೂ ಮಧ್ಯಾಹ್ನ ೦೨ ಗಂಟೆಗೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ ೧೦೦.ಮೀ
ಓಟ,  ಗುಂಡು ಎಸೆತ, ೭೫ ಮೀ, ಓಟ, ೭೫ಮೀ, ನಡಿಗೆ ಕ್ರೀಡಾ ಸ್ಪರ್ಧೆಗಳನ್ನು
ಆಯೋಜಿಸಲಾಗಿದೆ.  ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜನಪದ ಗೀತೆ, ಏಕಪಾತ್ರಾಭಿನಯ, ಪಿಕ್
ಆಂಡ್ ಸ್ಪೀಕ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಹಿಳೆಯರಿಗೆ ಮ್ಯೂಜಿಕಲ್ ಚೇರ್,
ಲೆಮನ್ ಸ್ಪೂನ್ ಕ್ರೀಡಾ ಸ್ಪರ್ಧೆಗಳನ್ನು ಹಾಗೂ ಜನಪದ ಗೀತೆ, ಏಕಪಾತ್ರಾಭಿನಯ, ಪಿಕ್
ಆಂಡ್ ಸ್ಪೀಕ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
    
ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ಹಿರಿಯ ನಾಗರಿಕರು ತಮ್ಮ ಹಿರಿಯ ನಾಗರಿಕರ ಗುರುತಿನ
ಚೀಟಿ ಅಥವಾ ವಯಸ್ಸಿನ ದಾಖಲೆ, ವಾಸಸ್ಥಳ ದಾಖಲೆಗಳನ್ನು ತಮ್ಮೊಂದಿಗೆ ತರಬೇಕು. ಜಿಲ್ಲಾ
ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರು ಸೆ.೨೨ ರಂದು ಬೆಂಗಳೂರಿನ ಕಂಠೀರವ
ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದವರು ಸೆ.೨೩ ರಂದು ಬೆಂಗಳೂರಿನ
ಕಬ್ಬನ್‌ಪಾರ್ಕ್‌ನ ಜವಾಹರ ಬಾಲಭವನದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ
ಭಾಗವಹಿಸಬಹುದಾಗಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರಯಾಣ
ಭತ್ಯೆಯನ್ನು ಇಲಾಖೆಯಿಂದ ಪಾವತಿಸಲಾಗುವುದು.
     ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ
ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಕೊಪ್ಪಳ, ದೂರವಾಣಿ ಸಂಖ್ಯೆ: ೦೮೫೩೯-೨೨೦೫೯೬
ಅಥವಾ ಮೊಬೈಲ್ : ೯೯೮೬೫೯೦೨೦೭ ಇವರನ್ನು ಸಂಪರ್ಕಿಸಬಹುದಾಗಿದೆ.  
Please follow and like us:
error