ಶ್ರೀರಾಮನಗರದಲ್ಲಿಂದು ಕೋಟಿ ದೀಪೋತ್ಸವ.

ಕೊಪ್ಪಳ-08- ಗಂಗಾವತಿ ತಾಲೂಕಿನ ಶ್ರೀ ರಾಮನಗರದ (ದೇಸಾಯಿಕ್ಯಾಂಪ್) ಶ್ರೀ ರಾಮಾಲಯದಲ್ಲಿ ಇದೇ ದಿ.೦೯ ರಂದು ಬುಧವಾರ ಕೋಟಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಆಲಯ ಟ್ರಸ್ಟ ಕಮಿಟಿ ಹಾಗೂ ಸ್ಥಳೀಯ ಸದ್ಭಕ್ತ ಮಂಡಳಿ ತಿಳಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಕಾರ್ತೀಕ ಮಾಸ ಬಹುಳ ತ್ರಯೋದಶಿ- ಚತುರ್ದಶಿ ಬೆಳಿಗ್ಗೆ ೯ ಗಂಟೆಗೆ ವೇದ ಪಂಡಿತರಿಂದ ಪಂಚಾಮೃತ ಅಭಿಷೇಕ, ಸಹಸ್ರ ಲಿಂಗಾರ್ಚನೆ, ರುದ್ರಹೋಮ ಹವನಗಳು ಸಕಲ ವಾದ್ಯಗಳೊಂದಿಗೆ ಮಾಸ ಶಿವರಾತ್ರಿ ಪರ್‍ಯ ದಿನದಂದು ಈ ಕಾರ್ಯಕ್ರಮ ಸಕಲ ಸಧ್ಭಕ್ತರ ಗ್ರಾಮಸ್ಥರ ಪರ್‍ಯವೇಕ್ಷಣದಲ್ಲಿ  ಜುರುಗುವುದು. ಸಂಜೆ ೬-೩೦ ಗಂಟೆಗೆ ಕೋಟಿ ದೀಪೋತ್ಸವ ಅತ್ಯಂತ ವಿಜ್ರಂಭಣೆಯಿಂದ ಸಹಸ್ರಾರು ಭಕ್ತರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮುಖದಲ್ಲಿ ನೆರವೇರಲಿದೆ. ಅದೇ ರೀತಿ ಸ್ವಾಗತದ ದ್ವಾರಬಾಗಿಲಿನಲ್ಲಿ ೩೫ ಪೀಟಿನ ಶಿವಲಿಂಗವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ನಂತರ ೭-೩೦ ಕ್ಕೆ ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವಿದ್ದು ಸಕಲ ಭಕ್ತಾದಿಗಳು ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಆಲಯ ಟ್ರಸ್ಟ ಕಮಿಟಿ ಹಾಗೂ ಸ್ಥಳೀಯ ಸದ್ಭಕ್ತ ಮಂಡಳಿ ಕೋರಿದೆ.
Please follow and like us:
error