fbpx

ದಸರಾ ಕ್ರೀಡಾಕೂಟದಲ್ಲಿ ಸಾಧನೆಗೈದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು

ನಗರದ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಆಶ್ರಯದಲ್ಲಿ ನಡೆದ  ತಾಲೂಕ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದ ಪುರುಷರ ಖೋಖೋ ತಂಡ, ಬಾಸ್ಕೆಟ್ ಬಾಲ್ ತಂಡ ಹಾಗೂ ಪುಟ್ಬಾಲ್ ತಂಡಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತವೆ  ಇದೇ ರೀತಿ ಕಾಲೇಜಿನ ವಿದ್ಯಾರ್ಥಿ ಬಿ.ಎ ಪದವಿಯಲ್ಲಿ  ಓದುತ್ತಿರುವ ಮಾರುತಿ ಎತ್ತರ ಜಿಗಿತದಲ್ಲಿ  ದ್ವೀತಿಯ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ  ಬಿ.ಎ ಪದವಿಯಲ್ಲಿ  ಓದುತ್ತಿರುವ  ಗಾಳೆಪ್ಪ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರ ಸಾಧನೆಗೆ ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರು, ದೈಹಿಕ ನಿರ್ದೇಶಕಿ ಶೋಭಾ ಕೆ ಎಸ್,   ಉಪನ್ಯಾಸಕರಾದ ತಿಮ್ಮಾರೆಡ್ಡಿ ಮೇಟಿ, ರಾಘವೇಂದ್ರಾಚಾರ್ಯ, ಪ್ರಭುರಾಜ ನಾಯಕ, ಸುರೇಶ ಸೊನ್ನದ್, ಪ್ರಕಾಶ ಗೌಡ,  ದಾರುಕಾಸ್ವಾಮಿ, ಡಾ.ಡಿ.ಎಚ್.ನಾಯಕ್, ಮಹೇಶ ಮಮದಾಪುರ ಆದಿಬಾಬು, ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:
error

Leave a Reply

error: Content is protected !!