ಅಪಾಯಕಾರಿ ಸಾಧ್ವಿ ಗಳು

ಈ ಸಾಧ್ವಿ ನಿರಂಜನ ಜ್ಯೋತಿ ಹೀಗೆ ಅವಾಚ್ಯ ಶಬ್ದಗಳನ್ನು ಬಳಸಿ ಮಾತಾಡಿದ್ದಕ್ಕೆ ಅಚ್ಚರಿಪಡಬೇಕಾಗಿಲ್ಲ. ಆರೆಸ್ಸೆಸ್ ಸಂಸ್ಕಾರ ಪಡೆದವರ ಭಾಷೆ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ‘‘ಸಂಘ ಪರಿವಾರದವರನ್ನು ಹೊರತುಪಡಿಸಿ ಉಳಿದವರನ್ನೆಲ್ಲ್ಲ ಹಾದರದ ಮಕ್ಕಳು’’ ಎಂದು ಈಕೆ ಹೇಳಿದ್ದಕ್ಕೆ ತಿಪ್ಪೆ ಸಾರಿಸಿ ತೇಪೆ ಹಚ್ಚಿದ ಪ್ರಧಾನಿ ನರೇಂದ್ರ ಮೋದಿ ಕೂಡ ಇಂಥ ಅಸಭ್ಯ ಭಾಷೆ ಯನ್ನು ಬಳಸಿಯೇ ಈ ಎತ್ತರಕ್ಕೆ ಬೆಳೆದು ನಿಂತವರು. ಅಂತಲೇ ಹೀಗೆ ಮಾತಾಡಿ ದಳೆಂದು ಈಕೆಯನ್ನೇನೂ ಮೋದಿ ರಾಜೀನಾಮೆ ಕೊಡಿಸಲಿಲ್ಲ
ಈ ರೀತಿ ಸಹ ಸಮುದಾಯಗಳ ಜನರ ಬಗ್ಗೆ ಅಸಭ್ಯ, ಅವಾಚ್ಯ ಭಾಷೆಯಲ್ಲಿ ಬೈದರೆ ಬಿಜೆಪಿಯಲ್ಲಿ ಅಂಥವರಿಗೆ ಭಡ್ತಿ ಸಿಗುತ್ತದೆ. ಇಂಥದೇ ಹೊಲಸು ಭಾಷೆಯಲ್ಲಿ ಬೊಗಳಿದ್ದ ಗಿರಿರಾಜ್ ಸಿಂಗ್ ಎಂಬಾತನಿಗೆ ಮೋದಿ ಕರೆದು ಹುಡುಕಿ ಕೇಂದ್ರ ಮಂತ್ರಿ ಯನ್ನಾಗಿ ಮಾಡಿದರು. ಹೀಗೆ ಮಾತಾ ಡುತ್ತಲೇ ಕೆ.ಎಸ್.ಈಶ್ವರಪ್ಪ ಉಪ ಮುಖ್ಯಮಂತ್ರಿ ಯಾದರು. ಉತ್ತರಪ್ರದೇಶ ದಲ್ಲಿ ಸಾಧ್ವಿ ರಿತಾಂಬರಾ ಎಂಬ ‘ಸನ್ಯಾಸಿನಿ’ಯೊಬ್ಬಳಿ ದ್ದಾರೆ. ಆಕೆ ಬಾಯಿ ಬಿಟ್ಟರೆ ಮಚ್ಚು, ಲಾಂಗು, ತ್ರಿಶೂಲ ಗಳೇ ಹೊರಬೀಳುತ್ತವೆ.
  ಭಾರತವನ್ನು ಹಿಂದೂ ರಾಷ್ಟ್ರ ವನ್ನಾಗಿ ಮಾಡುವ ಮೂಲಕ ಶ್ರೇಣೀಕೃತ ಜಾತಿ-ವ್ಯವಸ್ಥೆಗೆ ಜೀವ ಕೊಡುವ ಸಿದ್ಧಾಂತವನ್ನಿಟ್ಟುಕೊಂಡೇ ಹುಟ್ಟಿದ ರಾಷ್ಟ್ರೀಯ ಸ್ವಯಂ ಸೇವಕ (ಭಕ್ಷಕ) ಸಂಘ ಈ ಗುರಿಸಾಧನೆ ಗಾಗಿ 90ರ ದಶಕದಿಂದ ತೀವ್ರ ಕಾರ್ಯಾಚರಣೆಗೆ ಇಳಿಯಿತು. ಅದಕ್ಕಿಂತ ಮುನ್ನ ಎಲ್ಲರೂ ದೂರ ವಿಟ್ಟಿದ್ದರು. ಈ ಗಾಂಧಿ ಹಂತಕ ಪಡೆ ಯನ್ನು ಎಪ್ಪತ್ತರ ದಶಕದಲ್ಲಿ ಜಯಪ್ರಕಾಶ್ ನಾರಾಯಣ್ ತಮ್ಮ ಆಂದೋಲನದ ಮುಂಚೂಣಿಗೆ ತಂದು ನಿಲ್ಲಿಸಿದರು. ಕಾಂಗ್ರೆಸ್ ವಿರೋಧಿ ರಾಜಕಾರಣದ ಬಗ್ಗೆ ಮಾತಾಡುತ್ತಲೇ ಇತರ ಕಾಂಗ್ರೆಸ್ಸೇತರ ಪಕ್ಷಗಳನ್ನು ಈ ಫ್ಯಾಸಿಸ್ಟ್ ಪಡೆ ಅಳಿಸಿಹಾಕಿತು.
 ಜೆ.ಪಿ. ಚಳವಳಿಯಲ್ಲಿ ಮುಂಚೂಣಿಗೆ ಬಂದ ಆರೆಸ್ಸೆಸ್ ರಹಸ್ಯವಾಗಿಟ್ಟುಕೊಂಡಿದ್ದ ತನ್ನ ಹಿಂದೂ ರಾಷ್ಟ್ರ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಭಯೋತ್ಪಾದಕರ ಮಾದರಿಯಲ್ಲಿ ಕಾರ್ಯಕರ್ತರನ್ನು ತಯಾರು ಮಾಡತೊಡಗಿತು. ಆಗ ಹುಟ್ಟಿಕೊಂಡವರೇ ಈ ಸಾಧ್ವಿಗಳು. ಹಿಂದುಳಿದ ಸಮುದಾಯದಿಂದ ಕೆಲ ಯುವತಿಯರನ್ನು ರಾಮಜನ್ಮ ಭೂಮಿ ಚಳವಳಿಗೆ ಬಳಸಿಕೊಂಡು ಅವರನ್ನು ಪ್ರವಚನಕಾರರನ್ನಾಗಿ ಮಾಡಿದ ಸಂಘಪರಿವಾರ ಅವರ ಮೂಲಕ ಜನಾಂಗ ದ್ವೇಷದ ವಿಷಬೀಜ ವನ್ನು ಸಮಾಜದಲ್ಲಿ ಬಿತ್ತತೊಡಗಿತು.
  ಎಂಬತ್ತರ ದಶಕದ ಕೊನೆಯಲ್ಲಿ ಸಾಧ್ವಿ ಉಮಾಭಾರತಿಯವರು ಬೆಂಕಿ ಉಗುಳುವ ಭಾಷಣಗಳ ಮೂಲಕ ಜನರನ್ನು ಉದ್ರೇಕಗೊಳಿಸತೊಡಗಿದರು. ಅದೇ ಸಾಲಿನಲ್ಲಿ ಸಾಧ್ವಿ ರಿತಾಂಬರಾ, ಸಾಧ್ವಿ ಪ್ರಜ್ಞಾಸಿಂಗ್. ಈಗ ಹೊಲಸು ನಾಲಿಗೆ ಹರಿಬಿಟ್ಟ ನಿರಂಜನ ಜ್ಯೋತಿ. ಹೀಗೆ ಒಬ್ಬೊಬ್ಬರಾಗಿ ಉದುರಿ ಬೀಳತೊಡಗಿ ದರು. ಈ ಭಯೋತ್ಪಾದಕ ಬಾಯಿಗಳಿಗೆ ಕಡಿವಾಣ ಹಾಕಲು ಆಗಿನ ಉತ್ತರಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಯತ್ನಿಸಿದಾಗ ಅವರನ್ನೇ ‘ಮುಲ್ಲಾಸಿಂಗ್’ ಎಂದು ಈ ಸಾಧ್ವಿ ರಿತಾಂಬರಾ ಜರೆದಿದ್ದಳು.
   ಈ ಸಾಧ್ವಿಯರ ಚರಿತ್ರೆಯ ಬಗ್ಗೆ ನಾನು ಬರೆಯುವುದಿಲ್ಲ. ಉಪ್ಪು, ಖಾರ, ಹುಳಿ ತಿನ್ನುವ ಎಲ್ಲರಂತೆ ಇವರಿಗೂ ಕೆಲ ಹಸಿವುಗಳಿವೆ. ಈ ಹಸಿವನ್ನು ಹಿಂಗಿಸಿಕೊಳ್ಳುವ ಮಾರ್ಗಗಳು ಗೊತ್ತಿವೆ. ಈಗ ಕೇಂದ್ರ ಮಂತ್ರಿಯಾಗಿರುವ ಸಾಧ್ವಿ ಉಮಾಭಾರತಿಯವರ ಲೀಲೆಗಳ ಬಗ್ಗೆ ಬಿಜೆಪಿಯಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಾರೆ. ರವಿಬೆಳೆಗರೆ ಬರೆದ ‘ಕಾಮರಾಜ ಮಾರ್ಗ’ಕ್ಕೆ ಮುನ್ನುಡಿ ಬರೆದ ವಿಶ್ವೇಶ್ವರ ಭಟ್ಟರು ಸಾಧ್ವಿಯೊಬ್ಬರ ಹೆಸರು ಹಾಕದೆ ಆಕೆಯ ಲೀಲೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದೇನಿದ್ದರೂ ಅವರ ವೈಯಕ್ತಿಕ ವಿಷಯ. ಆ ಬಗ್ಗೆ ಟೀಕೆ ಅನಗತ್ಯ.
   ಆದರೆ ಈ ಸಾಧ್ವಿಯರು ಮಾಡು ತ್ತಿರುವ ಭಾಷಣ ಹಾಗೂ ಚಟುವಟಿಕೆ ಗಳು ಸಾಮಾಜಿಕ ಸೌಹಾರ್ದತೆ ಶಾಂತಿ ನೆಮ್ಮದಿಗೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಗಂಡಾಂತರಕಾರಿಯಾಗಿ ಪರಿಣಮಿಸಿವೆ. ಈ ಸಾಧ್ವಿಗಳ ಬಳಗದ ಪ್ರಜ್ಞಾಸಿಂಗ್ ಮಾಲೆಗಾಂವ್ ಬಾಂಬ್ ಸ್ಫೋಟ ಹಾಗೂ ಕೆಲ ಕಗ್ಗೊಲೆಗಳ ಆರೋಪದ ಮೇಲೆ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಹೇಮಂತ ಕರ್ಕರೆ ಆಕೆಯನ್ನು ಹಿಡಿದು ಹಾಕಿದಾಗ ಎಲ್.ಕೆ.ಅಡ್ವಾಣಿಯಿಂದ ಹಿಡಿದು ಪ್ರಮೋದ್ ಮುತಾಲಿಕ್‌ವರೆಗೆ ಎಲ್ಲರೂ ಆಕೆಯ ನೆರವಿಗೆ ಧಾವಿಸಿದ್ದರು.
 ಇಂಥ ಸಾಧ್ವಿಯವರನ್ನು ಸೃಷ್ಟಿಸುವ ಸಂಘ ಪರಿವಾರ ಈಗ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದಿದೆ. ಆರೆಸ್ಸೆಸ್ ಪ್ರಚಾರಕರಾಗಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅವರು ಮೊದಲಿ ನಂತಿಲ್ಲ ಎಂದು ಕೆಲ ಹಿರಿಯ ಪತ್ರಕರ್ತರು ಅಸಹಾಯ ಸಮಾಧಾನ ಪಟ್ಟುಕೊಂಡರೂ ಮೋದಿ ಬದಲಾಗಿಲ್ಲ ಎಂಬುದು ಹಗಲಿನಷ್ಟು ನಿಚ್ಚಳ. ವಾಜಪೇಯಿಯಷ್ಟು ಕೂಡ ಈತ ಆಡಳಿತನಿಷ್ಟ ಪ್ರಧಾನಿಯಲ್ಲ. ಅಂತಲೇ ಮೋದಿ ಸಂಪುಟದ ಆಯಕಟ್ಟಿನ ಸ್ಥಾನಗಳನ್ನು ಆರೆಸ್ಸೆಸ್ ಅಕ್ರಮಿಸಿದೆ.
ಆರೆಸ್ಸೆಸ್‌ನ ವಕ್ತಾರಾಗಿದ್ದ ಆಂಧ್ರಮೂಲದ ರಾಮಮಾಧವ ಈಗ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಧರ್ಮೇಂದ್ರ ಪ್ರಧಾನ್, ಜೆ.ಪಿ.ನಡ್ಡಾ, ಸುನೀಲ್ ಬನ್ಸಾಲ್, ಅಮಿತ್ ಶಾ, ಅನಂತ್‌ಕುಮಾರ್, ಉಮಾಭಾರತಿ, ನಿರಂಜನ ಜ್ಯೋತಿ ಹೀಗೆ ರಾಷ್ಟ್ರನಾಶಕ ಸ್ವಯಂ ಸೇವಕರ ಗ್ಯಾಂಗ್ ಕೇಂದ್ರದ ಆಯಕಟ್ಟಿನ ಜಾಗವನ್ನು ಆಕ್ರಮಿಸಿದೆ. ಅಂದರೆ ಯಾರು ಎಷ್ಟೇ ಪ್ರಚೋದನಕಾರಿ ಯಾಗಿ ಮಾತಾಡಿದರೂ ದಕ್ಕಿಸಿ ಕೊಳ್ಳೋ ತಾಕತ್ತು ಎಲ್ಲರಿಗೂ ಇದೆ.
ಸಾಧ್ವಿ ನಿರಂಜನ ಜ್ಯೋತಿ ಆಡಿದ ಮಾತು ಬರೀ ಮಾತಲ್ಲ. ಅದು ಬರಲಿರುವ ದಿನಗಳಲ್ಲಿ ಕಾರ್ಯಗತ ಗೊಳ್ಳಲಿರುವ ಆರೆಸ್ಸೆಸ್‌ಅಜೆಂಡಾದ ಒಂದು ಭಾಗ. ಈ ಅಪಾಯದ ಬಗ್ಗೆ ಕಾಂಗ್ರೆಸ್-ಎಡಪಕ್ಷಗಳು

ಸೇರಿದಂತೆ ಪ್ರತಿಪಕ್ಷಗಳಿಗೆ ಇನ್ನೂ ಸರಿಯಾದ ಅರಿವಿದ್ದಂತಿಲ್ಲ. ಅಂತಲೇ ಈಕೆಯ ಮಾತಿಗೆ ಸಾಂಕೇತಿಕ ಪ್ರತಿಕ್ರಿಯೆ ವ್ಯಕ್ತಪಡಿಸುವುದಕ್ಕಷ್ಟೇ ಈ ಪ್ರತಿರೋಧ ಸೀಮಿತಗೊಂಡಂತೆ ಕಾಣುತ್ತದೆ.

ಈ ಅಪಾಯದಿಂದ ಭಾರತವನ್ನು ಪಾರು ಮಾಡಬೇಕೆಂದರೆ ಬಲಿಷ್ಠವಾದ ಫ್ಯಾಸಿಸ್ಟ್ ವಿರೋಧಿ ರಂಗವೊಂದು ಹೊರಹೊಮ್ಮ ಬೇಕಾಗಿದೆ. ಜಾತ್ಯತೀತ ರಾಜಕೀಯ ಪಕ್ಷಗಳು ಮಾತ್ರವಲ್ಲ, ಪ್ರಗತಿಪರ ಸಾಮಾಜಿಕ ಸಂಘಟನೆಗಳು ಒಂದೇ ವೇದಿಕೆಗೆ ಬರಬೇಕಾಗಿದೆ. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಗ್ರಾಮೀಣ ಮಟ್ಟದಲ್ಲೂ ಸಂಘ ಪರಿವಾರಕ್ಕೆ ಪ್ರತಿರೋಧ ಒಡ್ಡಬಲ್ಲ ಪಡೆಯೊಂದು ಸಿದ್ಧವಾಗಬೇಕಿದೆ.
ಜಾತ್ಯತೀತ ಪಕ್ಷಗಳು, ಸಂಘಟನೆ ಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಭಾರತದ ಪ್ರಜಾಪ್ರಭುತ್ವ ಕುಸಿದು ಬೀಳುವ ಗಂಡಾಂತರ ಕಣ್ಣ ಮುಂದಿದೆ. ನರೇಂದ್ರ ಮೋದಿಯು ಹಿಟ್ಲರ್ ಮಾದರಿ ಸರ್ವಾಧಿಕಾರಿಯಾಗುವ ಮುನ್ನ ಪ್ರತಿರೋಧ ರೂಪುಗೊಳ್ಳಬೇಕಾಗಿದೆ. 
-varthabharati

Leave a Reply