You are here
Home > Koppal News > ಸಾಯಿ ಬೂಡೋಕನ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ

ಸಾಯಿ ಬೂಡೋಕನ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ

 ಕೊಪ್ಪಳ : ದಿ  ೦೧-೦೧-೨೦೧೫ ರಂದು ಹೊಸ ವರ್ಷದ ಅಂಗವಾಗಿ ಸಾಯಿ ಬೂಡೋಕನ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳಿಂದ ನಗರದ ಜಿ.ಜಿ. ಎಂ. ಎಸ್. ಶಾಲೆಯಲ್ಲಿ ಕರಾಟೆ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಶ್ರೀಕಾಂತ ಪಿ. ಕಲಾಲ ನೇತೃತ್ವದಲ್ಲಿ ನಡೆದ ಈ ಪ್ರದರ್ಶನದಲ್ಲಿ ಶಾಲೆಯ ೭ ನೇ ತರಗತಿ ವಿದ್ಯಾರ್ಥಿನಿ  ಸವಿತಾ ಕೊಂಡನಳ್ಳಿ ಹೊಟ್ಟೆಯ ಮೇಲೆ ಕಾಡು ಬಂಡೆಯನ್ನು ಒಡೆಯಲಾಯಿತು. ಈ ಸಾಹಸಕ್ಕೆ ವಿದ್ಯಾರ್ಥಿನಿಗೆ ಬಹುಮಾನ ನೀಡಿ ಶಿಕ್ಷಕರು ಪ್ರೋತ್ಸಾಹಿಸಿದರು. ಜೊತೆಗೆ ಕ್ರೀಡಾ ಪಟುಗಳಿಗೆ ಅಭಿನಂದಿಸಿದರು. 
ಈ ಸಂದರ್ಭದಲ್ಲಿ ಜಿ.ಜಿ. ಎಂ. ಎಸ್. ಶಾಲೆಯ ಎಲ್ಲಾ ವಿಭಾಗದ ಶಿಕ್ಷಕವೃಂದ, ವಿದ್ಯಾರ್ಥಿ ವಿದ್ಯಾಥಿನಿಯರು. ಮತ್ತು ಕರಾಟೆ ಶಿಕ್ಷಕ ಚಿರಂಜಿವಿ ಎಂ. ಗಿಣಗೇರಾ ಉಪಸ್ಥಿತರಿದ್ದರು.  

Leave a Reply

Top