fbpx

ಗ್ರಾಮೀಣ ಕ್ರೀಡೋತ್ಸವ ಎಲ್ಲಾ ಕಡೆಗಳಲ್ಲಿ ನಡೆಯಲಿ-ಕಸ್ತೂರೆಮ್ಮ

ಕೊಪ್ಪಳ, ಮಾ. ೭. ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಮತ್ತು ಪ್ರೋತ್ಸಾಹ ನೀಡುವ ಗ್ರಾಮೀಣ ಕ್ರೀಡೋತ್ಸವ ಎಲ್ಲಾ ಕಡೆಗಳಲ್ಲಿ ನಡೆಯಲಿ ಎಂದು ಜಿಲ್ಲಾ ಪಂಚಾಯತ ಸದಸ್ಯೆ ಕಸ್ತೂರೆಮ್ಮ ಬಿ. ಟಿ. ಪಾಟೀಲ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಶನಿವಾರ ಇರಕಲ್ಲಗಡಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವ ಮುಖಂಡ ಸಂಗಮೇಶ ಬಾದವಾಡಗಿ, ದೇಸಿ ಕ್ರೀಡೆಗಳನ್ನು ಪ್ರಚುರಪಡಿಸಲು ಹಮ್ಮಿಕೊಂಡಿರುವ ದೇಸಿ ಸ್ಪರ್ಧೆಗಳಲ್ಲಿ ಭಾಗವಹಿಸುವದೇ ಒಂದು ಸಂತೋಷ, ಉತ್ತಮವಾಗಿ ಕಾರ್ಯಕ್ರಮ ಸಂಘಟಿಸಿರುವ ಇಲಾಖೆಯ ಕೆಲಸ ಶ್ಲಾಘನೀಯವಾದದ್ದು, ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸವನ್ನು ಯುವಕರು ಮಾಡಬೇಕು, ಅಂಥಹ ಕೆಲಸ ಮಾಡುತ್ತಿರುವ ಗೊಂಡಬಾಳರಿಗೆ ಯುವಜನರ ಸಾಥ್ ಕೊಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ, ಮಾಜಿ ಚೇರಮನ್ ವೀರಬಸಪ್ಪ ಪಟ್ಟಣಶೆಟ್ರ, ಸಾಮಾಜಿಕ ಜೀವನದಲ್ಲಿ ಎಲ್ಲರಿಗೂ ಅವಕಾಶಗಳು ಸಿಗಬೇಕು, ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು, ಮಹಿಳೆಯರು ಮನೆಯಿಂದ ಹೊರಗಿರುವ ಪ್ರಪಂಚವನ್ನು ಸಹ ಅರಿತುಕೊಂಡು ನಡೆಯಬೇಕು, ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಸಂಘಟಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ, ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರಿಕೆಟ್ ಬಿಟ್ಟರೆ ಬೇರೆ ಆಟಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ಗ್ರಾಮೀಣ ಕ್ರಿಡೆಗಳು ನಶಿಸಿ ಹೋಗುತ್ತಿವೆ, ಅವುಗಳ ಪುನಃಶ್ಚೇತನಕ್ಕೆ ಸರಕಾರ ಒತ್ತು ನೀಡಿದೆ, ಯುವಜನರು ನಮ್ಮ ದೇಶೀ ಕ್ರೀಡೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಂಗಮೇಶ ಬಾದವಾಡಗಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ನಾಯಕ, ಗ್ರಾ. ಪಂ. ಕಾರ್ಯದರ್ಶಿ ಹನುಮಂತಪ್ಪ ನಾಯಕ, ಮಾರುತಿ ತೋಟಗಂಟಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಾಂದಸಾಬ್ ಹಳೆಮನೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಕುಂಬಾರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಸಿಆರ್‌ಸಿ ದ್ಯಾಮಣ್ಣ, ಸಮುದಾಯ ಸಂಘಟಕ ಮಾರುತಿ, ಎಸ್‌ಡಿಎಂಸಿ ಸದಸ್ಯ ಬಸವರಾಜ ಇತರರು ಇದ್ದರು. ಜಯಶ್ರೀ ದೇಸಾಯಿ ಪ್ರಾರ್ಥಿಸಿದರು, ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿದರು, ಶಿಕ್ಷಕ ಸುದೀಂದ್ರ ದೇಸಾಯಿ ಮತ್ತು ಗಣೇಶ ಹೊರತಟ್ನಾಳ ಜಂಟಿಯಾಗಿ ನಿರೂಪಿಸಿದರು ಕೊನೆಯಲ್ಲಿ ಬಸವರಾಜ ದೇಸಾಯಿ ವಂದಿಸಿದರು.
ಬಹುಮಾನ ವಿಜೇತರು (ಪುರುಷರು) : ಟಗ್ ಆಫ್ ವಾರ್ (ಗುಂಪು), ಪ್ರಥಮ ಇರಕಲ್ಲಗಡಾ ಪದವಿ ಕಾಲೇಜು, ದ್ವಿತಿಯ ಮಾರುತಿ ತೋಟಗಂಟಿ ಸಂಗಡಿಗರು, ಸಾಮೂಹಿಕ ರಸ್ತೆ ಓಟ ಪ್ರಥಮ  ಮಾರುತಿ ಕುದರಿಮೋತಿ, ದ್ವಿತಿಯ ರಾಮಣ್ಣ ಪಿನ್ನಿ, ತೃತೀಯ ಗಂಗಾಧರ ಹೆಚ್. ಕೆ., ಮ್ಯುಜಿಕಲ್ ಚೇರ್, ಪ್ರಥಮ ಬಾಲಾಜಿ ಪಿನ್ನಿ, ದ್ವಿತಿಯ ಹೆಚ್. ಮಂಗಳೇಶ, ತೃತೀಯ ರವಿ ಮೇದಾರ್, ಸ್ಲೋ ಸೈಕಲ್ ರೇಸ್ ಸ್ಪರ್ಧೆ ಪ್ರಥಮ ಮಂಜುನಾಥ ಎನ್., ದ್ವಿತಿಯ ಆನಂದ ಎಸ್. ಮತ್ತು ತೃತೀಯ ಮಂಜುನಥ ಪಿನ್ನಿ ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ಶರಣಪ್ಪ ಟಿ. ವಿ. ಪ್ರಥಮ, ಮಲ್ಲಣ್ಣ ಯಲಿಗಾರ ದ್ವಿತಿಯ ಹಾಗೂ ಮೌನೇಶ ಕುಂಬಾರ ತೃತೀಯ ಬಹುಮಾನ ಗಳಿಸಿದ್ದಾರೆ.
ಬಹುಮಾನ ವಿಜೇತರು (ಮಹಿಳೆಯರು) : ಟಗ್ ಆಫ್ ವಾರ್ (ಗುಂಪು), ಪ್ರಥಮ ಇರಕಲ್ಲಗಡಾ ಶ್ರೀ ಮಂಜುನಾಥ ಸ್ವಸಹಾಯ ಸಂಘ, ದ್ವಿತಿಯ ಶಿಕ್ಷಕಿಯರು ಸ. ಹಿ. ಪ್ರಾ. ಶಾಲೆ ಇರಕಲ್ಲಗಡಾ, ಸಾಮೂಹಿಕ ರಸ್ತೆ ಓಟ ಪ್ರಥಮ ಅಚಿಜಲಿ ಬೂದಿಹಾಳ, ದ್ವಿತಿಯ ನ್ನಪೂರ್ಣ, ತೃತೀಯ ಸುಮ ಇರಕಲ್ಲಗಡಾ, ಮ್ಯುಜಿಕಲ್ ಚೇರ್, ಪ್ರಥಮ ಶರಣಮ್ಮ ಹನುಮನಹಟ್ಟಿ, ದ್ವಿತಿಯ ಯಲ್ಲಮ್ಮ ಬೆಣಕಲ್, ತೃತೀಯ ಮೇಘಾ ಮೇದಾರ್, ಸ್ಲೋ ಸೈಕಲ್ ರೇಸ್ ಸ್ಪರ್ಧೆ ಪ್ರಥಮ ಶಿಲ್ಪಾ ನಿಂಗಪ್ಪ ಹೊಸಳ್ಳಿ, ದ್ವಿತಿಯ ಯಶೋಧಾ ಈರಪ್ಪ ಚಾಮಲಾಪೂರ ಮತ್ತು ತೃತೀಯ ಕಾಳಮ್ಮ ನಿಂಗಪ್ಪ ಹಕಾರಿ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಕವಿತಾ ಪಟ್ಟಣಶೆಟ್ಟಿ ಪ್ರಥಮ, ಚನ್ನಮ್ಮ ಪೋಲಿಸಪಾಟೀಲ ದ್ವಿತಿಯ ಹಾಗೂ ಜ್ಯೋತಿ ಸಂಗಟಿ ತೃತೀಯ ಬಹುಮಾನ ಗಳಿಸಿದ್ದಾರೆ ಎಂದು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಟಿ. ರಾಮಕೃಷ್ಣಯ್ಯ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!