ಕಸ್ತೂರಿ ಬಾ ಶಾಲೆಯ ಮಕ್ಕಳು ಲಕ್ಸಂಬರ್ಗ್ ಸಮ್ಮೇಳನಕ್ಕೆ ಆಯ್ಕೆ

 ಹೊಸಪೇಟೆ:ಕಮಲಾಪುರದ ಕಸ್ತೂರಿಬಾ ಬಾಲಕಿ ವಸತಿ ಶಾಲೆಯ ನಾಲ್ಕು  ವಿದ್ಯಾರ್ಥಿಗಳು ಸಖಿ ಸಂಸ್ಥೆಯಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜಾಗೃತಿಗಾಗಿ ನಡೆಯುವ ಲಕ್ಸಂಬರ್ಗ್ ಸಮ್ಮೇಳನಕ್ಕೆ ಆಯ್ಕೆಯಾಗಿದ್ದು, ಲಕ್ಸಂಬರ್ಗ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಕಮಲಾಪುರದ ಕಸ್ತೂರಿಬಾ ಬಾಲಕಿ ವಸತಿ ಶಾಲೆಯ ನಂದಿನಿ, ಲಕ್ಷ್ಮಿ, ನೀಲಮ್ಮ ಎಲ್ಲರೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಿದೇಶಿ ಪ್ರಯಾಣಕ್ಕೆ ಆಯ್ಕೆಯಾಗಿದ್ದು, ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಲಕ್ಷ್ಮೀ, ದುರ್ಗಾರಾಣಿ, ಇವರಿಬ್ಬರು ಈಗ ಪಿಯು ಎರಡನೇ ವರ್ಷದ ವಿದ್ಯಾರ್ಥಿಗಳು ಇವರು ಕೂಡಾ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇದೇ ೬ರಿಂದ ಮೇ ೧೫ರವರೆಗೆ ಇವರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗಿಯಾಗಿ ಮಹಿಳಾ ಸಬಲೀಕರಣಕ್ಕೆ ತಮ್ಮದೇ ಆದ ಶಕ್ತಿ ತುಂಬಲಿ ಎಂದು ಮುಖ್ಯ ಶಿಕ್ಷಕಿ ಹೆಚ್. ಲಲಿತಾ ಶುಭ ಹಾರೈಸಿ, ಇವರ ವಿದೇಶ ಪ್ರಯಾಣ ಸುಖಕರವಾಗಲಿ ಎಂದು ಶುಭ ಹಾರೈಸಿದ್ದಾರೆ. 

Related posts

Leave a Comment