ಶೀಘ್ರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣ : ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ ಅ.೧೫: ಈ ಭಾಗದ ರೈತರ ಬಹು ದಿನಗಳ ಬೇಡಿಕೆಯಾದ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಶೀಘ್ರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವರಾದ ಶಿವರಾಜ ತಂಗಡಗಿ ಅವರನ್ನು ಈ ಗ್ರಾಮಕ್ಕೆ ಕರೆತಂದು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಭರವಸೆ ನೀಡಿದರು.

ಅವರು ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ತಮ್ಮ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಸುಮಾರು ೪.೦೦ ಲಕ್ಷ ರೂ. ವೆಚ್ಚದಲ್ಲಿ ವೃತ್ತ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡುತ್ತ, ಹಿರೇಬಗನಾಳ-ಚಿಕ್ಕಬಗನಾಳ ಗ್ರಾಮದ ೧ ಕಿ.ಮೀ. ರಸ್ತೆ ಕಾಮಗಾರಿಯು ಸ್ಥಗೀತಗೊಂಡಿದ್ದು, ಶೀಘ್ರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಯಾರ ಅಡೆ-ತಡೆ ಇಲ್ಲದೇ ಭದ್ರತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗುವುದು. ಅಲ್ಲದೇ ಈ ಭಾಗದ ಗ್ರಾಮಸ್ಥರ ನೇತೃತ್ವದಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.  
ಚಿಕ್ಕಬಗನಾಳ ಗ್ರಾಮದ ಕರ್ಕಿಹಳ್ಳಿ ರಸ್ತೆಯಿಂದ ತುಂಗಭದ್ರಾ ನದಿ ದಂಡೆಯವರೆಗೂ ಡಾಂಬರೀಕರಣ, ಗ್ರಾಮಕ್ಕೆ ರಂಗಮಂದಿರ ಸೇರಿದಂತೆ ಮುಸ್ಲಿಂ ಸಮಾಜದವರಿಗೆ ಅನುಕೂಲವಾಗಲು ಸಮುದಾಯ ಭವನ ಕಾಮಗಾರಿಯನ್ನು ಮಂಜೂರು ಮಾಡಿಕೊಡುವುದಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ವಿಎಸ್‌ಎಸ್‌ಎನ್ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಇತರೆ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಸೋಮಣ್ಣ ಬಾರಕೇರ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಹೇಮಣ್ಣ ದೇವರಮನಿ, ಬನ್ನೆಪ್ಪಗೌಡ ಕೆ.ಪೊಲೀಸ್ ಪಾಟೀಲ್, ಗ್ರಾ.ಪಂ.ಸದಸ್ಯರಾದ ಬಸವರಾಜ ಬಂಗಾಳಿ, ಕಂಬಣ್ಣ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ದಾದಾಪೀರ, ಗ್ರಾಮದ ಹಿರಿಯರಾದ ರಾಮಣ್ಣ ಬಂಗಾಳಿ, ನರಸಿಂಹಗೌಡ ದಳಪತಿ, ರಾಜಕುಮಾರ, ಯುವಕರಾದ ಸಿದ್ದನಗೌಡ ಪೋಲೀಸ್ ಪಾಟೀಲ್, ಗವಿಸಿದ್ದಪ್ಪ ಬೋರಿನ್, ಯಮನಪ್ಪ ಕವಳಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error