ಹುಲಿಗಿಯಲ್ಲಿ ಧಾರ್ಮಿಕ ದಿನ : ವಿಶೇಷ ಪೂಜೆ

ರಾಜ್ಯದಲ್ಲಿ ವರ್ಷದ ಎಲ್ಲಾ ಧಾರ್ಮಿಕ ದಿನಗಳನ್ನು ಆಚರಣೆ ಮಾಡುವುದು ಚಾಂದ್ರಮಾನ ಯುಗಾದಿಯಿಂದ ಪ್ರಾರಂಭವಾಗುತ್ತದೆ ಹಾಗೂ ಆ ದಿನವು ದೈವಿಕವಾಗಿ ರಾಜ, ಮಂತ್ರಿ, ಸೇನಾಪತಿ ಎನ್ನುವ ಮುಂತಾದ ಹೆಸರಿನಿಂದ ಧಾರ್ಮಿಕ ಸಂಪುಟವು ಪ್ರಾರಂಭವಾಗುವುದರಿಂದ ರಾಷ್ಟ್ರೀಯ ಪಂಚಾಂಗ ಚಾಂದ್ರಮಾನ ಯುಗಾದಿಯ ದಿನವನ್ನು ಧಾರ್ಮಿಕ ದಿನ ಎಂದು ಘೋಷಿಸಿ ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಏ.೧೧ ರಂದು ಬೆಳಿಗ್ಗೆ ಶ್ರೀ ಹುಲಿಗೆಮ್ಮ ದೇವಿಗೆ ಬಂಗಾರದ ಮುಕುಟ ಅಲಂಕಾರದೊಂದಿಗೆ ವಿಶೇಷ ಪೂಜೆ, ಸಾಯಂಕಾಲ ೬.೩೦ ಕ್ಕೆ ಶ್ರೀ ವಿಜಯನಾಮ ಸಂವತ್ಸರದ ನೂತನ ಪಂಚಾಂಗ ಪಠಣ, ರಾತ್ರಿ ೭.೧೫ ಕ್ಕೆ ರಾಜೇಶ್ವರ ಹರಿಕಥಾ ವಿದೂಸಿ ಬೆಂಗಳೂರು ಇವರಿಂದ ಶ್ರೀ ರೇಣುಕಾ ಮಹಾತ್ಮೆ ಎಂಬ ಕೀರ್ತನೆ ನಂತರ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಗುವುದು. ಈ ದಿನದಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಸಕಲ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿ  ತಿಳಿಸಿದೆ.

Related posts

Leave a Comment