ಪತ್ರಿಕಾ ದಿನಾಚರಣೆ, ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭ.

ಕೊಪ್ಪಳ, ಜು.೧೪:  ಇಲ್ಲಿನ ವಿಶಾಲ ಪ್ರಕಾಶನ ಸಿರಿಗನ್ನಡ ವೇದಿಕೆ ಹಾಗೂ ಮಾದಿನೂರು ಶ್ರೀ ನಿಮಿಷಾಂಬ ಪ್ರಕಾಶನ ಶ್ರೀ ವರಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ಧಿ ಮತ್ತು ಕಲ್ಯಾಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಇದೇ ದಿ.೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಇಲ್ಲಿನ ಸಾಹಿತ್ಯಭವನದಲ್ಲಿ ಪತ್ರಿಕಾ ದಿನಾಚರಣೆ, ಪುಸ್ತಕ ಬಿಡುಗಡೆ, ಕವಿಗೋಷ್ಟಿ ಸೇರಿದಂತೆ ಮಾಧ್ಯಮ ಸೇವಾ ಪುರಸ್ಕಾರ ಹಾಗೂ ಸನ್ಮಾನ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಂದು ಪ್ರಾಯೋಜಕ ಹಾಗೂ ಲೇಖಕ ಜಿ.ಎಸ್. ಗೋನಾಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕುಕನೂರಿನ ಮಹಾದೇವಯ್ಯ ದೇವರು ಮಹಾಸ್ವಾಮಿಗಳು ಹಾಗೂ ಭಾಗ್ಯನಗರ ಶಂಕರಾಚಾರ್ಯಮಠದ ಶಿವಪ್ರಕಾಶನಂದ ಸ್ವಾಮೀಜಿ ವಹಿಸಲಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ನೆರವೇರಿಸಿದರೆ,  ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ನೆರವೇರಿಸಲಿದ್ದಾರೆ.
ಜಿ.ಎಸ್.ಗೋನಾಳ ರವರ ಲೇಖನಗಳ ಸಂಗ್ರಹ ಮಾಧ್ಯಮದ ಹೊಣೆ ಕೃತಿಯನ್ನು ದೆಹಲಿಯ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಉಪಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಪುಸ್ತಕ ಬಿಡುಗಡೆಗೊಳಿಸಿದರೆ, ಶಿಲ್ಪಾ ರಮೇಶ ಕುರಿ ಯವರ ಕವನ ಸಂಕಲನ ಭಾರತಾಂಬೆ ಕೃತಿಯನ್ನು ಬೆಂಗಳೂರಿನ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಎಮ್.ಎಸ್.ವೆಂಕಟರಾಮಯ್ಯ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶೇಖರಗೌಡ್ರ ಮಾ.ಪಾ., ಹಿರಿಯ ಸಾಹಿತಿಗಳಾದ ಹೆಚ್.ಎಸ್. ಪಾಟೀಲ್, ವಿಠ್ಠಪ್ಪ ಗೋರಂಟ್ಲಿ, ಡಾ. ಮಹಾಂತೇಶ ಮಲ್ಲನಗೌಡರ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕು.ಸರೋಜಾ ಬಾಕಳೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಹಿರಿಯ ಸಾಹಿತಿಗಳಾದ ಅಲ್ಲಮ್ಮಪ್ರಭು ಬೆಟ್ಟದೂರು, ಡಾ. ವ್ಹಿ.ಬಿ. ರಡ್ಡೇರ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಕ್ಷಣಾ ವೇದಿಕೆ (ಸ್ವಾ.ಬ.) ರಾಜ್ಯಾಧ್ಯಕ್ಷ ಕೃಷ್ಣೇಗೌಡ, ಜಿಲ್ಲಾ ವಾರ್ತಾಧಿಕಾರಿ ಬಿ.ವ್ಹಿ. ತುಕಾರಾಮ್, ಹಾಸನದ ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ಕನ್ನಡಪ್ರಭ ಪತ್ರಿಕೆ ಜಿಲ್ಲಾವರದಿಗಾರ ಸೋಮರಡ್ಡಿ ಅಳವಂಡಿ, ಕಾ.ನಿ.ಪ.ಸಂ. ಜಿಲ್ಲಾಧ್ಯಕ್ಷ ಎಮ್.ಸಾಧಿಕ ಅಲಿ, ಗಂಗಾವತಿ ಸುದ್ದಿ ಚಿಂತನ ಪತ್ರಿಕೆ ಸಂಪಾದಕ ಸಿ.ಹೆಚ್. ನಾರಿನಾಳ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ನಿರ್ಮಲಾ ವ್ಹಿ. ಬಳ್ಳೊಳ್ಳಿ, ಹಿರಿಯ ಪತ್ರಕರ್ತ ಹೆಚ್.ಎಸ್.ಹರೀಶ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾನಘಂಟಿ ಆಗಮಿಸಲಿದ್ದಾರೆ.
ಇದೇ ವೇಳೆ ಪತ್ರಿಕಾ ಪ್ರತಿನಿಧಿಗಳ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಮ್ಮಿಕೊಂಡಿದ್ದು ಆಸಕ್ತರು ಪ್ರಾಯೋಜಕರಲ್ಲಿ ಹೆಸರು ನೊಂದಾಯಿಸಲು ತಿಳಿಸಿದ್ದಾರೆ.
ಮಾಧ್ಯಮ ಸೇವಾ ಪುರಸ್ಕಾರ ಸನ್ಮಾನಿತರಾಗಿ ಆಯ್ಕೆಗೊಂಡವರು ಗಂಗಾವತಿ ತಾಲೂಕಿನ ಪ್ರಸನ್ನ ದೇಸಾಯಿ, ಮಹೆಬೂಬ ಕನಕಗಿರಿ, ಚಾಂದ್‌ಸಿಂಗ್, ಪುರಷೋತ್ತಮರಡ್ಡಿ ಕನಕಗಿರಿ, ಕೃಷ್ಣ ವೀರಾಪೂರ, ದಿಗಂಬರ ಕಾರಟಗಿ, ಸಿ.ಮಹಾಲಕ್ಷ್ಮೀ ಕೇಸರಹಟ್ಟಿ, ವ್ಹಿ. ಎಸ್.ಪಾಟೀಲ್, ಕುಷ್ಟಗಿ ತಾಲೂಕಿನ ಸಂಗಮೇಶ ಸಿಂಗಾಡಿ, ಬಸವರಾಜ ಪಲ್ಲೇದ್, ಶರಣಪ್ಪ ಕುಂಬಾರ, ವೆಂಕಟೇಶ ಕುಲಕರ್ಣಿ, ವಿ.ಆರ್.ತಾಳಿಕೋಟಿ, ಯಲಬುರ್ಗಾ ತಾಲೂಕಿನ ಶರಣಕುಮಾರ ಅಮರಗಟ್ಟಿ, ಸ.ಶರಣಪ್ಪ ಪಾಟೀಲ್, ಶಿವಮೂರ್ತಿ ಇಟಗಿ,  ರುದ್ರಪ್ಪ ಬಂಡಾರಿ, ವೀರಯ್ಯ ಹಿರೇಮಠ ಮತ್ತು ಕೊಪ್ಪಳ ತಾಲೂಕಿನ ಗಂಗಾಧರ ಬಂಡಿಹಾಳ, ಮಂಜುನಾಥ ಡೊಳ್ಳಿನ, ದೇವು ನಾಗನೂರು, ಪವನ ದೇಶಪಾಂಡೆ, ಎನ್.ಎಂ. ದೊಡ್ಡಮನಿ, ಮಾರುತಿ ಕಟ್ಟಿಮನಿ, ಹುಲಿಗೆಮ್ಮ ಗಿಣಗೇರಿ, ಪ್ರಕಾಶ ಕಂದಕೂರು, ಸತೀಶ ಮುರಾಳ, ರವಿಕುಮಾರ ನಾಯಕ, ಗಿರೀಶ ಕುಲಕರ್ಣಿ, ಶರಣಬಸವ ಕಟ್ಟಿಮನಿ, ಮಂಜುನಾಥ ಕರಗಲ್, ಬಸವರಾಜ ಬಿನ್ನಾಳ, ಹನುಮಂತ ಹಳ್ಳಿಕೇರಿ, ಮಂಜುನಾಥ ಗೊಂಡಬಾಳ, ಗುರುರಾಜ ಡಂಬಳ, ನಾಗರಾಜ ಕಲಾಲ್, ರಾಜಸಾಬ ತಾಳಿಕೇರಿ ಸನ್ಮಾನ ಸ್ವೀಕರಿಸಲಿದ್ದಾರೆ.
ವಿಶೇಷ ಸನ್ಮಾನಿತರಾಗಿ ಮಹೇಶಬಾಬು ಸುರ್ವೆ, ರಾಘವೇಂದ್ರ ಗಂಗಾವತಿ ಬೆಂಗಳೂರು, ಅರುಣ ಕಟವಟೆ, ವಿನಾಯಕ ಕೋನಾ, ಸೈಯದ್ ಗೌಸ್‌ಪಾಷಾ, ಪಾಂಡುರಂಗ ಚಿತ್ರಗಾರ, ಉಮೇಶ ಮುದೋಳ ಸನ್ಮಾನಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ಈ ಕಾರ್ಯಕ್ರಮಗಳ ಯಶಸ್ವಿಗೆ ಪತ್ರಿಕಾ ಆಸಕ್ತರು, ಸಾಹಿತ್ಯಾಭಿಮಾನಿಗಳು ಸ್ವಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರಿಲ್ಲಿ ಕೋರಿದ್ದಾರೆ.
Please follow and like us:
error