ಎಂ.ಎಂ. ಕಲಬುರ್ಗಿರವರ ಹತ್ಯೆ ಖಂಡಿಸಿ ಸಮಗ್ರ ತನಿಖೆಗಾಗಿ ಎಸ್.ಎಫ್.ಐ ಪ್ರತಿಭಟನೆ.

ಕೊಪ್ಪಳ-30- ಭಾರತ ವಿದ್ಯಾರ್ಥಿ ಫೆಡರೇಶನ್ ಕೊಪ್ಪಳ ಜಿಲ್ಲಾ ಸಮಿತಿಯು ಪ್ರತಿಭಟನೆ ಮೂಲಕ ಒತ್ತಾಯಿಸುವುದೇನೆಂದರೆ ಹಿರಿಯ ಸಾಹಿತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರಗತಿ ಪರ ವಿಚಾರವಾದಿಗಳು ಆದಂತಹ ಎಂ.ಎಂ ಕಲಬುರ್ಗಿ ಇವರನ್ನು ಮುಂಜಾನೆ ಅಮಾನುಷವಾಗಿ ಹತ್ಯೆಗೊಳಿಸಿರುವುದು ಈ ನಾಡಿನ ದುರದೃಷ್ಟಕರ ಸಂಗತಿಯಾಗಿರುತ್ತದೆ. ಸಮಾಜಕ್ಕೆ ತಮ್ಮ ವಿಚಾರವಾದಗಳ ಸಾಹಿತ್ಯಗಳ ಮೂಲಕ ಕೊಡುಗೆ ನೀಡಿದ್ದು ಶಿಕ್ಷಣ ಕ್ಷೇತ್ರದಲ್ಲೂ ಕುಲಪತಿಗಳಾಗಿ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲೂ ಗುರುತರ ಪಾತ್ರ ವಹಿಸಿ ನಾಡಿನ ಜನ ಮನ ಗೆದ್ದಿರುತ್ತಾರೆ. ಇಂತಹ ಹಿರಿಯ ಸಾಹಿತಿ ಮುತ್ಸದ್ದಿಗಳನ್ನು ಯಾವುದೋ ಕ್ಷುಲ್ಲಕ ವಿಚಾರಕ್ಕಾಗಿ ದಾಳಿ ಮಾಡಿ ಹತ್ಯೆ ಮಾಡಿರುವುದನ್ನು ಎಸ್.ಎಫ್.ಐ ಜಿಲ್ಲಾ ಸಮಿತಿಯು ತೀವೃವಾಗಿ ಖಂಡಿಸುತ್ತದೆ. ರಾಜ್ಯದ ಹೊಣ ಹೊತ್ತ ಮುಖ್ಯಮಂತ್ರಿಗಳ ಜವಾಬ್ದಾರಿಯುತವಾಗಿ ಸುದೀರ್ಘ ಹಾಗೂ ಸಮಗ್ರ ತನಿಖೆ ನಡೆಸಿ ಆದಷ್ಟು ಬೇಗೆ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಕೊಪ್ಪಳ ಎಸ್.ಎಫ್.ಐ ಜಿಲ್ಲಾ ಸಮಿತಿಯು ಒತ್ತಾಯಿಸುತ್ತಿದೆ.

Leave a Reply