ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣ ಬೃಹತ್ ಸಾಮಾಜಿಕ ಜಾಗೃತಾ ಜಾಥಾ

ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ
ಕೊಪ್ಪಳ  ೨೭ : ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನಾಚರಣೆ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೩೬ ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣ ಸಾಮಾಜಿಕ ಜಾಗೃತಾ ಜಾಥಾದಲ್ಲಿ ನಗರದ ವಿವೇಕಾನಂದ ಶಾಲೆಯ ೭೦೦ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಶಾಲಾ ಸಿಬ್ಬಂದಿ ಮತ್ತು ಪಾಲಕರು ಪಾಲ್ಗೊಂಡಿದ್ದರು.
ಜಾಥಾವನ್ನು ಧ್ವಜ ತೋರಿಸುವುದರ ಮೂಲಕ ರಾಮಕೃಷ್ಣ-ವಿವೇಕಾನಂದ ಆಶ್ರಮ ಕೊಪ್ಪಳದ ಅಧ್ಯಕ್ಷರಾದ ಶ್ರೀ ಚೈತನ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು. ಜಾಥಾ ಸಂಚಲನವು ವಿವೇಕಾನಂದ ಶಾಲೆಯಿಂದ ಪ್ರಾರಂಭವಾಗಿ ಸಾಲಾರ ಜಂಗ್ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ಸಾಗಿ ಮತ್ತೆ ಶಾಲೆಯ ಆವರಣದಲ್ಲಿ ಮುಕ್ತಾಯವಾಯಿತು. ಸುಮಾರು ಮೂರು ತಾಸುಗಳ ಬೃಹತ್ ಜಾಥಾದಲ್ಲಿ ನಿಸರ್ಗ ಉಳಿಸಿ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ ೩೭೧ ಕಲಮಿನ ತಿದ್ದುಪಡಿ ಅಗತ್ಯ, ಗುಟಕಾ-ಮದ್ಯಪಾನ ನಿಷೇಧ, ಭ್ರಷ್ಟಾಚಾರ ತೊಲಗಿಸಿ, ಪ್ಲಾಸ್ಟಿಕ್ ನಿಷೇದ, ಶ್ರೇಷ್ಠ ವ್ಯಕ್ತಿಗಳ ನುಡಿಗಳು ಸೇರಿದಂತೆ ಭ್ರಷ್ಟಾಚಾರ ಮುಕ್ತ ಬಲಿಷ್ಠ ರಾಷ್ಟ್ರ ಕಟ್ಟೋಣ, ಕಾಡು ಬೆಳೆಸಿ-ನಾಡು ಉಳಿಸಿ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಬಾಲ್ಯ ವಿವಾಹದ ಪರಿಣಾಮಗಳು ಹೀಗೆ ೧೫೦ ಭಿತ್ತಿ ಪತ್ರಗಳು, ಲೇಜಿಮ್ ಕುಣಿತ, ಡೊಳ್ಳು, ಬಾಜಾ-ಭಜಂತ್ರಿ, ರಾಮಕೃಷ್ಠ ಪರಮಹಂಸ-ವಿವೇಕಾನಂದ-ಶಾರದಾದೇವಿ ವೇಷಭೂಷಣದೊಂದಿಗೆ ೭೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತ ನಗರದ ಮುಖ್ಯ ಬೀದಿಗಳಲ್ಲಿ ಜಾಗೃತಿ ಮೂಡಿಸುತ್ತ ಜಾಥಾದ ಯಶಸ್ಸಿಗೆ ಕಾರಣರಾದರು.
ಕೊಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮಹೇಶ ಮಿಟ್ಟಲಕೋಡ, ಖಜಾಂಚಿ ಪರಮೇಶ್ವರಪ್ಪ ಕೊಪ್ಪಳ, ಪ್ರಭು ಹೆಬ್ಬಾಳ, ಬಸವರಾಜ ಬಳ್ಳೊಳ್ಳಿ, ಜವಾಹರ ಜೈನ್, ಬಿ. ಕಾಂತಿಲಾಲ್, ಚಂದ್ರಕಾಂತ ತಾಲೆಡಾ, ಸುರೇಶ ಸಂಚೈತಿ ಮತ್ತು ಇತರ ಲಯನ್ಸ್ ಪದಾಧಿಕಾರಿಗಳು, ಶಾಲಾ ಪ್ರಾಚಾರ್ಯರಾದ ಎ. ಧನಂಜಯನ್, ೬೦ ಕ್ಕೂ ಹೆಚ್ಚು ಶಾಲಾ ಸಿಬ್ಬಂದಿ ವರ್ಗ ಮತ್ತು ಪಾಲಕರು ಈ ಬೃಹತ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

Leave a Reply