ಸರ್ಕಾರದ ಸವಲತ್ತುಗಳ ಸದೂಪಯೋಗ ಪಡೆದುಕೊಳ್ಳಿ ವಿಧ್ಯಾರ್ಥಿಗಳಿಗೆ ಲತಾ ವೀರಣ್ಣ ಸಂಡೂರು ಕರೆ.

ಕೊಪ್ಪಳ-೨೮, ಶುಕ್ರವಾರ, ನಗರದ ಪಲ್ಟನ ಓಣಿಯಲ್ಲಿ ಇರುವ ಜಿ.ಜಿ.ಎಮ್.ಎಸ್. ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಸೈಕಲ್ ವಿತರಣೆಮಾಡಿ ಮಾತನಾಡಿದ ಅವರು  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಧ್ಯಾರ್ಥಿಗಳಿಗೆ ಅನೇಕ ಯೋಜನೆಗಳನ್ನು ಜಾರಿಗೆತಂದು ವಿಧ್ಯಾರ್ಥಿಗಳ ಉತ್ತಮ ಶಿಕ್ಷಣಪಡೆಯಲು ಅನೇಕ ರಾಜ್ಯವ್ಯಾಪಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.  ವಿಧ್ಯಾರ್ಥಿಗಳ ಅಪೌಶ್ಟಿಕತೆ ನಿವಾರಣೆಗೆ ಕ್ಷೀರ ಭಾಗ್ಯ ಯೋಜನೆ ಮಕ್ಕಳಿಗೆ ಮೂಟ್ಟೆಕೊಡುವುದು, ಗುಣಮಟ್ಟದ ಮದ್ಯಾಹ್ನದ ಊಟ ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ವಿಧ್ಯಾರ್ಥಿಗಳಿಗೆ ಶೋ-ಕೊಡುವ ಯೋಜನೆಯನ್ನು ಹೊಂದಿದ್ದು ಇಂತಹ ಯೋಜನೆಗಳ ಸದೋಪಯೋಗಪಡೆದು ಪಾಲಕರು ಮತ್ತು ಪೋಷಕರು ಶಾಲೆಯ ಮಕ್ಕಳ ಹಾಜರಾತಿಗೆ ಮುತವರ್ಜಿವಹಿಸಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ನೊಂದಣಿಮಾಡಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚಕಮಿಟಿ ಅಧ್ಯಕ್ಷರಾದ ಅಬ್ದುಲ್ ಅಜೀಜ್, ಅಕ್ಬರ ಪಾಷಾ ಪಲ್ಟನ, ಅಜ್ಜಪ್ಪ ಸ್ವಾಮಿ, ಬಿ.ಆರ್.ಸಿ.ಸಂಚಾಲಕರು, ಎಸ್.ಬಿ.ಕುರಿ, ಆನಂದ ಆಡೂರು, ಅನಿತಾ ಬೊಂದಾಡೆ, ಶಾಲೆಯ ಮುಖ್ಯೊಪಾಧ್ಯಾರು, ಶಿಕ್ಷಕರು, ಉಪಸ್ತಿತರಿದ್ದರು.

Leave a Reply