ಪ್ರೊ.ಎಂ.ಕೃಷ್ಣಪ್ಪ ಅವರಿಗೆ ಡಾ.ಎಚ್.ಎನ್.ಪ್ರಶಸ್ತಿ ಪ್ರದಾನ

 ಬಳ್ಳಾರಿ, ಜ.೧೩: ನಗರದ ಡಾ.ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ಕುವೆಂಪು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಸಸ್ಯವಿಜ್ಞಾನಿ ಪ್ರೊ.ಎಂ.ಕೃಷ್ಣಪ್ಪ ಅವರಿಗೆ ೨೦೧೧ನೇ ಸಾಲಿನ ರಾಜ್ಯ ಮಟ್ಟದ ಡಾ.ಎಚ್.ಎನ್.ಪ್ರಶಸ್ತಿಯನ್ನು ನೀಡಿ ಗೌರವಿಸಿತು.
  ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದಲ್ಲಿ ಜರುಗಿದ ಸರಳ, ಹೃದಯಸ್ಪರ್ಶಿ ಸಮಾರಂಭದಲ್ಲಿ ವೇದಿಕೆಯ ಅಧ್ಯಕ್ಷ, ಪತ್ರಕರ್ತ ಸಿ. ಮಂಜುನಾಥ ಅವರು ಪ್ರೊ.ಎಂ.ಕೃಷ್ಣಪ್ಪ ಅವರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿದರು.
 ಈ ಸಂದರ್ಭದಲ್ಲಿ ನಿವೃತ್ತ ಕುಲಸಚಿವ(ಪರೀಕ್ಷಾಂಗ) ಪ್ರೊ.ಕಮಲಕರ್, ಅಬಕಾರಿ ಇಲಾಖೆಯ ನಿವೃತ್ತ ಉಪ ಆಯುಕ್ತ ಬಿ.ಡಿ.ಸಾವಕ್ಕನವರ್, ಪ್ರಾಧ್ಯಾಪಕರಾದ ಡಾ.ಜೆ. ನಾರಾಯಣ ಮತ್ತು ಪ್ರಾಚಾರ್ಯರಾದ ಮಹೇಶ್, ಸಹಾಯಕ ಪ್ರಾಧ್ಯಪಕ ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಉಪಸ್ಥಿತರಿದ್ದರು.
ಅಕ್ಟೋಬರ್‌ನಲ್ಲಿ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಶಸ್ತಿಪ್ರದಾನ ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಪ್ರೊ. ಕೃಷ್ಣಪ್ಪ ಅವರು ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ವೇದಿಕೆ ಅಧ್ಯಕ್ಷ ಶಿವಮೊಗ್ಗಕ್ಕೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿದರು. 
Please follow and like us:
error