ಹೈ-ಕ ವಿಶೇಷ ಸಭೆ : ಜು. ೦೩ ರಂದು ಮಧ್ಯಾಹ್ನ ೨ ರವರೆಗೆ ಅಭಿಪ್ರಾಯ ಸಲ್ಲಿಕೆಗೆ ಅವಕಾಶ

  ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಸಂಬಂಧ ಹೊಸಪೇಟೆಯ ಅಮರಾವತಿ ಪ್ರವಾಸಿ ಮಂದಿರ ಬಳಿಯ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ, ಕೊಪ್ಪಳ ಜಿಲ್ಲೆಯವರಿಗೆ ಲಿಖಿತ ರೂಪದ ಅಭಿಪ್ರಾಯ ಮತ್ತು ಸಲಹೆಗಳನ್ನು ಸಲ್ಲಿಸಲು ಜುಲೈ ೦೩ ರಂದು ಮಧ್ಯಾಹ್ನ ೧೨ ರಿಂದ ೦೨ ಗಂಟೆಯವರೆಗೆ ಅವಕಾಶ ಇರುತ್ತದೆ ಎಂದು ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
  ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಯಮಾವಳಿ ರೂಪಿಸಲು ಅಭಿಪ್ರಾಯ/ಸಲಹೆ ಗಳ ಒಂದು ಪ್ರತಿಯನ್ನು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದವರಿಗೆ ಮಾತ್ರ  ಹೊಸಪೇಟೆಯಲ್ಲಿ ಜರುಗುವ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ತಮ್ಮ ಲಿಖಿತ ಅಭಿಪ್ರಾಯ ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ತಿಳಿಸಿದ್ದಾರೆ.

Leave a Reply