ಕೈ ಜೋಡಿಸಿ ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಎಂದು ಕರೆ ಕೊಡುತ್ತಿರುವ ಬ್ಯಾಗುಗಳು.

ಕೊಪ್ಪಳ-18- ಪರಿಸರ ನಾಶ ನಮಗೆಲ್ಲ ವಿಷ, ಎದ್ಧೇಳಿ ಪರಿಸರ ರಕ್ಷಣೆಗೆ, ಕೈ ಜೋಡಿಸಿ ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ,  ಒಳ್ಳೆಯ ಪರಿರ ನೆಮ್ಮದಿಯ ಆಖರ, ಒಳ್ಳೆಯ ಪರಿಸರ ಉತ್ತಮ ಆರೋಗ್ಯ ನಿಖರ, ಒಳ್ಳೆಯ ಪರಿಸರದಿಂದ ನೂರು ವರ್ಷ ಬಾಳಿರಿ ಆನಂದದಿಂದ ಎಂದು ಸಾರುವ ಪರಿಸರ ರಕ್ಷಣೆಯ ಈ ಸಾಲುಗಳು ಕಂಡು ಬರುವದು ಹೂಲನ್ ಬ್ಯಾಗುಗಳ ಮೇಲೆ.
ಹೌದು ಈ ಹೂಲನ್ ಬ್ಯಾಗುಗಳು ಈ ವರ್ಷ ಗವಿಮಠದ ಜಾತ್ರೆಗೆ ಬರುವ ಭಕ್ತರ ಮನಸ್ನನ್ನು ಆಕರ್ಷಣೆ ಮಾಡಲಿವೆ. ಜನವರಿ ೨೬ ರಂದು ಜರುಗಲಿರುವ ಕೊಪ್ಪಳದ  ಶ್ರೀಗವಿಸಿದ್ಧೇಶ್ವರ ಜಾತ್ರೆಯ ನಿಮಿತ್ಯ ಕೊಪ್ಪಳದ ವರ್ತಕರಾದ  ಸುಖಪ್ರದ ಹೋಂ ಅಪ್ಲೈನಿಕ್ಸ ಹಾಗೂ ಆರೋಗ್ಯ ವರ್ಧಿನಿ ಮೆಡಿಕಲ್ಸ ಮಾಲೀಕರಾದ ಶರಣಬಸವಯ್ಯ ಹಾಗೂ ಗುರುಬಸವಯ್ಯ ಇವರುಗಳು ಜಾತ್ರೆಯ ಪೂರ್ವಭಾವಿಯಗಿ ಪರಿಸರ ಸಂರಕ್ಷಣೆಗಾಗಿ ತಮ್ಮ ಅಳಿಲು ಸೇವೆಯನ್ನು ಈ ರೀತಿಯಾಗಿ ಸಲ್ಲಿಸಿದ್ದಾರೆ.
ಅಜ್ಜನ ಜಾತ್ರೆಗೆ ಬನ್ನಿ ಎಂದು ಕರೆ ಕೊಡುವ ಸಾಲುಗಳ ಜೊತೆಗೆ ಶ್ರೀಗವಿಸಿದ್ಧೇಶ್ವರ ಭಾವಚಿತ್ರವುಳ್ಳ  ದೊಡ್ಡ ಹೂಲನ್ ಬ್ಯಾಗುಗಳನ್ನು ತಯರಿಸಿ ಶ್ರೀಗವಿಮಠಕ್ಕೆ ಅರ್ಪಿಸಿದ್ದಾರೆ.  ಬ್ಯಾಗಿನ ಎರಡು ಪಕ್ಕದಲ್ಲಿ ಪರಿಸರ ಸಂರಕ್ಷಣೆಗಾಗಿ ನಾವು ವಹಿಸಬೇಕಾದ ಕಾಳಜಿಯನ್ನು ತಿಳಿಸುವದರ ಜೊತೆಗೆ  ಪರಿಸರ ರಕ್ಷಣೆಯಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ  ಜವಾಬ್ದಾರಿಯನ್ನು ಸಹ ಜನತೆಗೆ ತಿಳಿಸಿದ್ದಾರೆ. ಈ ಮೂಲಕ ತಮ್ಮ ಸಮಾಜೋಧಾರ್ಮಿಕ ಕಾಯಕವನ್ನು ಮಾಡಿರುವದು ಹೆಮ್ಮೆಯ ಸಂಗತಿ.

Related posts

Leave a Comment