ಕೊಪ್ಪಳ ಇಂದು ಪ್ರತಿಭಟನೆಯ ದಿನ


ಕೊಪ್ಪಳದಲ್ಲಿಂದು ಮೆರವಣಿಗೆಗಳದೇ ಸುದ್ದಿ, ಕೆಲ ಹೊತ್ತು ಮಾರ್ಕೆಟ್ ಮಾಡಿದ್ದು, ಮಾನವ ಸರಪಳಿ, ಬೈಕ್ ರ್ಯಾಲಿ ಇವುಗಳದೇ ಸುದ್ದಿ. ಅಣ್ಣಾ ಹಜಾರೆಯ ಹೋರಾಟವನ್ನು ಬೆಂಬಲಿಸಿ ಕೊಪ್ಪಳದಲ್ಲಿಂದು ಎಬಿವಿಪಿ ಅಶೋಕ್ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಂತರ ಕೋಕಾಕೋಲಾ ಬೇವರೇಜಸ್ ನ ಗುತ್ತಿಗೆ ಕಾರ್ಮಿಕರು,ಕಾರ್ಮಿಕ ಸಂಘಟನೆಗಳವರು ಬಸವರಾಜ ಶೀಲವಂತರ, ವಿಠ್ಠಪ್ಪ ಗೋರಂಟ್ಲಿ ಹಾಗೂ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು.
ಕೊಪ್ಪಳ ಜಿಲ್ಲಾ ಕಾನ್ಫಡರೇಷನ್ ಆಫ್ ಇಂಡಸ್ಟ್ರೀ ಮತ್ತು ಕಾಮರ್ಸ್ ಇವರ ನೇತೃತ್ವದಲ್ಲಿ ಕೊಪ್ಪಳದ ಸಕಲ ವರ್ತಕರು ಕೆಲ ಹೊತ್ತು ಕೊಪ್ಪಳದ ತಮ್ಮ ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ, ಬೈಕ್ ರ್ಯಾಲಿ ನಂತರ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿದರು.
ಕೊನೆಗೆ ಎಲ್ಲರೂ ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Leave a Reply