ಇಂದು ಜೆಡಿಎಸ್ ಎಸ್ ಸಿ ಪದಾಧಿಕಾರಿಗಳ ಸಭೆ

ಕೊಪ್ಪಳ. ೧೩. ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೆಪ್ಟೆಂಬರ್ ೧೪ ರಂದು ಜೆಡಿಎಸ್ ಎಸ್ ಸಿ ಘಟಕದ ಪದಾಧಿಕಾರಿಗಳ ಸಭೆ ಜರುಗಲಿದೆ ಎಂದು ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷ ದೇವಪ್ಪ ಕಾಮದೊಡ್ಡಿ ಪ್ರಕಟಣೆ ನೀಡಿದ್ದಾರೆ. ಸಭೆಯಲ್ಲಿ ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ್ ಯತ್ನಾಳ, ಜಿಲ್ಲಾಧ್ಯಕ್ಷ ನಾಗಪ್ಪ ಸಾಲೋಣಿ, ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಅನ್ನದಾನಿ, ಕಾರ್ಯದರ್ಶಿ ಸಿದ್ದೇಶ ದದೇಗಲ್ ಇತರರು ಭಾಗವಹಿಸುವರು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಉಪ ಪಂಗಡಗಳ ಮುಖಂಡರು ಭಾಗವಹಿಸುವಂತೆ ದೇವಪ್ಪ ಕಾಮದೊಡ್ಡಿ ಕೋರಿದ್ದಾರೆ.
ಕೊಪ್ಪಳ : ಜೆಡಿಎಸ್ ಎಸ್ ಟಿ ಘಟಕಕ್ಕೆ ಶೀಘ್ರವೇ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ. ೧೩. ಶೀಘ್ರವೇ ಜೆಡಿಎಸ್ ಎಸ್ ಟಿ ಘಟಕದ ಪದಾಧಿಕಾರಿಗಳ ಸಭೆ ಜರುಗಲಿದೆ ಎಂದು ಜೆಡಿಎಸ್ ರಾಜ್ಯ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಅನಂತಯ್ಯ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳ, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ್ ಯತ್ನಾಳ, ಜಿಲ್ಲಾಧ್ಯಕ್ಷ ನಾಗಪ್ಪ ಸಾಲೋಣಿ, ಮಾಜಿ ಜಿ. ಪಂ. ಅಧ್ಯಕ್ಷೆ ಮಾಲತಿ ನಾಯಕ, ಹನುಮಂತಪ್ಪ ಹ್ಯಾಟಿ ಇತರರು ಭಾಗವಹಿಸುವರು ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದ ಜೆಡಿಎಸ್ ಕಾರ್ಯಕರ್ತರು ಮುಖಂಡರು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಲು ಮಂಜುನಾಥ ಜಿ. ಗೊಂಡಬಾಳ ವಿಶ್ವ ಆಫ್ ಸೆಟ್ ಪ್ರಿಂಟರ್‍ಸ್, ತಾಲೂಕ ಪಂಚಾಯತಿ ಕಾಂಪ್ಲೆಕ್ಸ್, ಕೊಪ್ಪಳ. ಮೊ : ೯೪೪೮೩೦೦೦೭೦ ಇಲ್ಲಿ ಸಂಪರ್ಕಿಸುವಂತೆ ಕೋರಿದ್ದಾರೆ.
Please follow and like us:
error