ಅನುಭಾವಿಗಳ ಅಮೃತ ಕಾರ್ಯಕ್ರಮದಲ್ಲಿ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿಗಳಿಂದ ಆಶಿರ್ವಚನ

ಸಾಹಸದಿಂದ ಕೂಡಿದ ಕರಾಟೆ ಪ್ರದರ್ಶನ
ಕೊಪ್ಪಳ:  ಸಂಸ್ಥಾನ ಶ್ರೀಗವಿಮಠದ ಆವರಣದಲ್ಲಿಂದು ಜ್ಞಾನ ಯೋಗ ವೇದಿಕೆ ವತಿಯಿಂದ  ಕರಾಟೆ
ಪ್ರದರ್ಶನ ನಡೆಯಿತು.  ಸಿ.ಪಿ.ಐ ವಿಜಯ ಬಿರಾದಾರ  ಕರಾಟೆ ಪ್ರದರ್ಶನದ ಉದ್ಘಾಟನೆಯನ್ನು
ಮಾತನಾಡಿದರು. ಅತಿಥಿಗಳಾಗಿ ಪತ್ರಕರ್ತರಾದ ದೇವುನಾಗನೂರ,  ಕರಾಟೆಮೌನೇಶ, ರಾಜಶೇಖರ
ಮಳಿಮಠ  ಉಪಸ್ಥಿತರಿದ್ದರು. ನೇತ್ರತ್ವ ವಿಜಯಕುಮಾರ ಕವಲೂರ ವಹಿಸಿದ್ದರು.
 

ದಾಸೋಹದಲ್ಲಿಂದು
ಕೊಪ್ಪಳ ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮಹಾದಾಸೋಹದ ೨ ನೇ ದಿನವು ಕೂಡಾ ಲಕ್ಷಕ್ಕಿಂತಲೂ
ಹೆಚ್ಚೂ ಭಕ್ತರು ಪ್ರಸಾದ ಸವಿಯನ್ನು ಸವಿದರು. ದಾಸೋಹದ ಪ್ರಸಾದವನ್ನು ಸ್ವೀಕರಿಸಲು
ದ್ವಾರ ಬಾಗಿಲು ಹಾಗೂ  ಮುಖ್ಯರಸ್ತೆಯವರೆಗೂ ಭಕ್ತರ ಸಾಲು ನಿಂತಿತ್ತು. ಪ್ರಸಾದದಲ್ಲಿ
ಪುರುಷರಿಂತ ಮಹಿಳೆಯರ ಸಾಲುಗಳೇ ಹೆಚ್ಚಾಗಿತ್ತು. ಇಂದೂ ಕೂಡಾ ಬನ್ನಿಕೊಪ್ಪ ಗ್ರಾಮದ
ಭಕ್ತರು ಪ್ರಸಾದ ಬಡಿಸುವ ಕಾರ್ಯವನ್ನು ನಿರ್ವಹಿಸಿದರು. ಕಡಕ್ ರೊಟ್ಟಿ, ಬದನೆ,
ಮಡಕಿಕಾಳು, ಕೆಂಪು ಮೆಣಸಿನಕಾಯಿಚಟ್ನ, ಹಾಲು,ತುಪ್ಪ, ಮಾದಲಿ, ಜುನಕಾ ಹೀಗೆ ವಿವಿಧ 
ಪದಾರ್ಥಗಳು ದಾಸೋಹದಲ್ಲಿ ಲಬ್ಯವಿದ್ದವು.  

     
ಅನುಭಾವಿಗಳ ಅಮೃತ ಕಾರ್ಯಕ್ರಮದಲ್ಲಿ  ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿಗಳಿಂದ ಆಶಿರ್ವಚನ
ಕೊಪ್ಪಳ : ಬೆಂಕಿಯ ಮೇಲಿಟ್ಟ ಪಾತ್ರೆಯಲ್ಲಿನ ಬೆಣ್ಣೆ ಕರಗುವಂತೆ ಮಹಾತ್ಮರ ಮನಸ್ಸು ಕೂಡಾ ಭಕ್ತರ ದು:ಖ, ದುಮ್ಮಾನ ಹಾಗೂ ಧೀನತೆಗಳನ್ನು ಕಂಡು ಸಹಜವಾಗಿ ಕರಗುತ್ತದೆ. ಅಂತ:ಹ ಮಹಾತ್ಮರ ಅಂತ:ಕರಣ ಹರಿದು ಬಂದು ಪವಾಡವಾಗುತ್ತದೆ.   ಆ ನಿಟ್ಟಿನಲ್ಲಿ ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭಕ್ತಾಧಿಗಳ ಅಂತ:ಕರಣ ಕಂಡು ಶ್ರೀಗವಿಮಠದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥಗಳಿಗೆ ವಿನೂತನತೆ ನೀಡಿ, ಸಾವಿರಾರು ಬಡಮಕ್ಕಳಿಗಾಗಿ ವಸತಿ ನಿಲಯದಲ್ಲಿಟ್ಟುಕೊಂಡು ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತಾಧಿಗಳಿಗೆ ಅನ್ನ ಪ್ರಸಾದ ದೊರೆಯುವಂತೆ ಮಾಡಿದ್ದಾರೆ. ಈ ಎಲ್ಲ ರಚನಾತ್ಮಕ ಕಾರ್ಯಗಳನ್ನು ಮಾಡುತಿರುವ ಇಂದಿನ  ಶ್ರೀಗವಿಸಿದ್ಧೇಶ್ವರ  ಮಹಾಸ್ವಾಮಿಗಳು  ಕರ್ತೃ ಶ್ರೀಗವಿಸಿದ್ಧೇಶ್ವರ  ರೂಪದಲ್ಲಿ ಅವತರಿಸಿದ್ದಾರೆ. ಅವರ ಪ್ರಯತ್ನ , ವಿಚಾರ ಹಾಗೂ ಕ್ರಿಯಾಶೀಲತೆಗಳು ಜಾತ್ರೆಗೆ ಹೊಸ ರೂಪ ಬರುವಂತಾಗಿದೆ. ಶಿವಶಾಂತವೀರ ಶಿವಯೋಗಿಗಳ ಕಾಲದಿಂದಲೂ ಮುಂಡರಗಿ ಮಠಕ್ಕೂ ಕೊಪ್ಪಳದ ಗವಿಮಠಕ್ಕೂ ಉತ್ತಮ ಸಂಬಂಧವಿದೆ. ಅದನ್ನು ಈಗೀನ ಪೂಜ್ಯರು ಉಳಿಸಿಕೊಂಡಿದ್ದಾರೆ. ಗವಿಸಿದ್ಧೇಶ್ವರ ಸಕಲರಿಗೆ ಸನ್ಮಂಗಲವುಂಟು ಮಾಡಲಿ ಎಂದು  ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿಗಳು ಭಕ್ತಾಧಿಗಳಿಗೆ ಆಶಿರ್ವಚನಗೈದರು. ಪೂಜ್ಯರು ದಿನಾಂಕ ೧೮-೦೧-೨೦೧೪ ರಂದು ಮಹಾರಥೋತ್ಸವ ಜರುಗಿದ ಬಳಿಕ ಕೈಲಾಸ ಮಂಟಪದಲ್ಲಿ ಸಾಯಂಕಾಲ ೬ ಗಂಟೆಗೆ ಅನುಭಾವಿಗಳ ಅಮೃತ  ಈ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶಿರ್ವಚನಗೈದರು. ಸಭೆಯಲ್ಲಿ  ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಹುಬ್ಬಳ್ಳಿ,  ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ ಕನಕ ಗುರು ಪೀಠ ತಿಂಥಿಣಿ ಬ್ರಿಜ್, ಶ್ರೀಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು iದ್ದಾನೀಶ್ವರ ಹಿರೇಮಠ ಕುಷ್ಟಗಿ, ಶ್ರೀಪರಮಪುಜ್ಯ ಸದ್ಗುರು ಸಂಪೂರ್ಣಾನಂದ ಮಹಾಸ್ವಾಮಿಗಳು ಇಬ್ರಾಹಿಂಪೂರ ವಹಿಸಿ ಮಾತನಾಡಿದರು.  ವೇದಿಕೆಯಲ್ಲಿ ಶ್ರೀ. ಷ.ಬ್ರ. ನಾಗಭೂಷಣ ಶಿವಾಚಾರ್ಯರ ಮಹಾಸ್ವಾಮಿಗಳು ಹೆಬ್ಬಾಳ, ಶ್ರೀ. ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮಂಗಳೂರ, ಆರೀಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು ಹೂವಿನಹಡಗಲಿ ಮೊದಲಾದ ಹರಗುರುಚರಮೂರ್ತಿಗಳು ಆಶೀನರಾಗಿದ್ದರು. ನಿರೂಪಣೆ ಶ್ರೀ ಚನ್ನಮಲ್ಲ ದೇವರು ಕುಕುನೂರ ನೆರವೇರಿಸಿದರು.

.

Leave a Reply