ನೇಕಾರರು ಶೈಕ್ಷಣಿಕವಾಗಿ ಮುಂದುವರಿಯಬೇಕು.

 ನೆಕಾರರು ತುಂಬಾ ಬಡತನದ ಸ್ಥಿತಿಯಲ್ಲಿದ್ದು ಶೈಕ್ಷಣಿಕವಾಗಿ ಗಿಂದುಳಿದಿದ್ದಾರೆ ಅವರ ಪ್ರಗತಿ ಶಿಕ್ಷಣದಿಂದ ಮಾತ್ರ ಸಾದ್ಯ ಎಂದು ಜಿಲ್ಲಾ ನೆಕಾರ ಸಮುದಾಯದ ಒಕ್ಕೂಟದ ಅದ್ಯಕ್ಷ ಕಾಳಪ್ಪ ಕೋಂಕ್ತಿ ಫೆ ೪ ರಂದು ಭಾಗ್ಯನಗರದ ಪದ್ಮಶಾಲಿ ಸಮಾಜದವರು ಮಾರ್ಕಂಡೇಶ್ವರ ಮೂರ್ತಿ ಪ್ರತಿಷ್ಠಾನದ ೧೫ ನೇಯ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜ ಶೈಕ್ಷಣಿಕವಾಗಿ ಮುಂದುವರಿಯಲು ಶ್ರಮಿಸಬೇಕೆಂದರು ಇದೇ ಸಂದರ್ಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಯಾವುದೇ ಸಮಾಜ ಶಿಕ್ಷಣದಿಂದ ಮಾತ್ರ ಮುಂದುವರಿಯಲು ಸಾಧ್ಯ ಸಂಪ್ರಾದಾಯಕ ಕಲೆ ನೇಕಾರರಿಕೆಯನ್ನು ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಉಳಿಸಿಕೊಳ್ಳುವುದು ಕಷ್ಟವಾಗಿದೆ ನೇಕಾರಿಕೆಯಲ್ಲಿ ಕೆಲಸ ಮಾಡುವರರಿಗೆ ಹೆಚ್ಚಿನ ಕೂಲಿ ಸಿಕ್ಕರೆ ಮಾತ್ರ ಅದು ಉಳಿಯುತ್ತದೆ ಇಲ್ಲವಾದರೆ ನಶಿಸಿ ಹೋಗುತ್ತದೆ ಎಂದರು. 
ಹೊಸಪೇಟೆ ಪದ್ಮಶಾಲಿ ಸಮಾಜದ ಅಧ್ಯಕ್ಷ ಜೋಡಾ ರಾಮಪ್ಪ ನೇಕಾರ ಪದ್ಮಶಾಲಿ ಮೂಲ ಪುರುಷ ಭಾವನಾಋಉಷಿ ಭಾವಚಿತ್ರ ಅನಾವರಣಗೊಳಿಸಿದರು ಗವಿಸಿದ್ದೇಶ್ವರ  ಕಾಲೇಜಿನ ಉಪನ್ಯಾಸಕಿ ಡಾ. ಪಾರ್ವತಿ ಪೂಜಾರ  ನಿವೃತ್ತ ಪಶುವೈದ್ಯ ಪರೀಷಕ ಅಶೋಕ ಚಳಮರದ ಸಂತೋಷ ಡಬ್ಬಿನ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು. ಕೂಲಿ ಮಾಡುತ್ತಲೇ ಕಲಿತು  ರ‍್ಯಾಂಕ್ ಪಡೆದು ಪ್ರಸ್ತುತ ಎಂ.ಬಿ.ಬಿ.ಎಸ್ ಕಲಿಯುತ್ತಿರುವ ಬಸವರಾಜ ರ‍್ಯಾವಣಕಿಯನ್ನು ಗೌರವಿಸಲಾಯಿತು. ಭಾಗ್ಯನಗರ ಪದ್ಮಶಾಲಿ ಸಮಾಜದ ಅಧ್ಯಕ್ಷ ಏಕನಾಥಪ್ಪ ದೇವರದುರ್ಗ ಅಧ್ಯಕ್ಷತೆವಹಿಸಿದ್ದರು. ಯುವಕ ಮಂಡಳದ ಅಧ್ಯಕ್ಷ ತಿಪ್ಪಣ್ಣ ಮ್ಯಾಡಂ ಸ್ವಾತಿಸಿದರು. ಅರವಿಂದ ಮುಂಡರಗಿ ವಂದಿಸಿದರು. 
Please follow and like us:
error