ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ ಅರ್ಜಿ ಆಹ್ವಾನ.

ಕೊಪ್ಪಳ, ಜ.೩೦ (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಂಶೋಧನಾ ಅಧ್ಯಯನಕ್ಕಾಗಿ ಫೆಲೋಷಿಪ್ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅಕಾಡೆಮಿ ವ್ಯಾಪ್ತಿಗೊಳಪಡುವ ಯಕ್ಷಗಾನ ಬಯಲಾಟದ ಕಲಾ ಪ್ರಕಾರಗಳಾದ ಬಯಲಾಟ (ಮೂಡಲಾಪಯ, ಯಕ್ಷಗಾನ, ದೊಡ್ಡಾಟ, ಕೇಳಿಕೆ, ಘಟ್ಟದಕೋರೆ, ಯಕ್ಷಗಾನ ಇತ್ಯಾದಿ), ಸಣ್ಣಾಟ (ಸಂಗ್ಯಾ-ಬಾಳ್ಯಾ, ರಾಧಾನಾಟ, ಕಡ್ಲೀಮಟ್ಟಿ ಸ್ಟೇಷನ್ ಮಾಸ್ಟರ್ ಇತ್ಯಾದಿ), ಸೂತ್ರದ ಗೊಂಬೆಯಾಟ, ತೊಗಲುಗೊಂಬೆಯಾಟ, ಯಕ್ಷಗಾನ (ತೆಂಕುತಿಟ್ಟು, ಬಡಗುತಿಟ್ಟು, ತಾಳಮದ್ದಳೆ), ಶ್ರೀಕೃಷ್ಣಪಾರಿಜಾತ ಇತ್ಯಾದಿಗಳ ಬಗ್ಗೆ ಒಂದು ವರ್ಷ ಕಾಲ ಅಧ್ಯಯನ ಮಾಡಿ ಪ್ರಬಂಧ ಮಂಡಿಸುವವರಿಗೆ ಫೆಲೋಷಿಪ್ ನೀಡಲಾಗುತ್ತದೆ. ಈ ಸಂಶೋಧನಾ ಕಾರ್ಯಕ್ಕಾಗಿ ಒಬ್ಬ ಸಂಶೋಧನಾ ಅಭ್ಯರ್ಥಿಗೆ ೦೧ ಲಕ್ಷ ರೂ. ಒದಗಿಸಲಾಗುತ್ತದೆ. ಪರಿಶಿಷ್ಟ ವರ್ಗ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ, ಕನ್ನಡ ಎಂ.ಎ (ಜಾನಪದ, ಸಮಾಜ ವಿಜ್ಞಾನ, ಮಹಿಳಾ ಅಧ್ಯಯನ, ಸಾಹಿತ್ಯ, ಚರಿತ್ರೆಮಾನವಶಾಸ್ತ್ರ ಇತ್ಯಾದಿ) ವ್ಯಾಸಂಗ ಮಾಡಿರುವವರು ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ತಾವು ಆಯ್ಕೆ ಮಾಡಿಕೊಳ್ಳುವ ಅಧ್ಯಯನದ ವಿಷಯದ ಬಗ್ಗೆ ನಾಲ್ಕು ಪುಟಗಳ ಸಾರಾಂಶ ಹಾಗೂ ತಮ್ಮ ಸಾಧನೆಯ ಕಿರುಪರಿಚಯ ಹಾಗೂ ಜಾತಿ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ೨ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೨ ಇವರಿಗೆ ಅಥವಾ ಇಮೇಲ್ ವಿಳಾಸ

kybabangalore@gmail.com ಫೆ.೨೫ ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Please follow and like us:
error