You are here
Home > Koppal News > ಸ್ಲಂ ಪ್ರದೇಶ ಚರಂಡಿ ಕಾಮಗಾರಿಗೆ ಒತ್ತಾಯಿಸಿ ನಗರಸಭೆಗೆ ಮುತ್ತಿಗೆ

ಸ್ಲಂ ಪ್ರದೇಶ ಚರಂಡಿ ಕಾಮಗಾರಿಗೆ ಒತ್ತಾಯಿಸಿ ನಗರಸಭೆಗೆ ಮುತ್ತಿಗೆ

ಕರವೇ ಕೊಪ್ಪಳ ತಾಲೂಕ ಘಟಕ ಘೋಷಿತ ಕೊಳಚೆ (ಸ್ಲಂ) ಪ್ರದೇಶಗಳಿಗೆ ಒಳ ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ  ನಗರ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ : ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣಗೌಡ ಬಣ) ಕೊಪ್ಪಳ ಜಿಲ್ಲಾ ಸಂಚಾಲಕರಾದ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ ಕರವೇ ಕರ್ನಾಟಕದ ಸಮಗ್ರ ಅಭಿವೃದ್ಧಿ ಪರ ಹೋರಾಟ ಮಾಡುತ್ತಾ ಬಂದಿದ್ದು ಈಗ ಕೊಪ್ಪಳ ನಗರದ ಸರಕಾರವು ಘೋಷಿತ ಕೊಳಚೆ (ಸ್ಲಂ) ಪ್ರದೇಶಗಳಾದ ದೇವರಾಜ ಅರಸ್ ಕಾಲೋನಿ, ಶ್ರೀ ಬಸವೇಶ್ವರ ನಗರ ಸಜ್ಜಿಹೊಲ, ವಡ್ಡರ ಓಣಿ , ಮೋಚಿ ವಾಡಾ, ಶ್ರೀಶೈಲ ನಗರ, ಗಾಂದಿನಗರ ಹಾಗೂ ಸರದಾರ ಗಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಕಡು ಬಡವರು ದೀನ, ದಲಿತರು, ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಾಗಿವೆ. ಈ ಒಂದು ಪ್ರದೇಶಕ್ಕೆ ಒಳಚರಂಡಿ ಅಭಿವೃದ್ಧಿ ಪಡಿಸುವಲ್ಲಿ ಮೊದಲ ಆಧ್ಯತೆಯನ್ನು ಕೊಡಬೇಕಿತ್ತು. ಆದರೆ ಇದನ್ನು ಹೊರತು ಪಡಿಸಿ ನಗರದ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಈ ಒಂದು ವ್ಯವಸ್ಥೆಯನ್ನು ಕಲ್ಪಿಸಿ ಕೊಳಚೆ ಪ್ರದೇಶದ ನಿವಾಸಿಗಲಿಗೆ ನಗರ ಸಭೆ ಆಡಳಿತವು ಘೋರ ಅನ್ಯಾಯ ಮಾಡಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ. ಯಾರೋ ಮಾಡಿದ ಬಡಾವಣಿಗಳಿಗೆ ಒಳ ಚರಂಡಿ ವ್ಯವಸ್ಥೆ ಕಲ್ಪಸಿ ಸರಕಾರದ ಹಣ ಪೋಲ್ ಮಾಡುತ್ತಿರುವ ನಗರ ಸಭೆ ಕೇವಲ ಅಧಿಕಾರಿ ಶಾಹಿ ಆಡಳಿತವನ್ನು ನಡೆಸುತ್ತಿದೆ. ಸ್ಲಂ ಪ್ರದೇಶದ ಅಭಿವೃದ್ಧಿಗೆ ಸರಕಾರದಿಂದ ಕೋಟಿ ಕೋಟಿ ಹಣ ಬಿಡುಗಡೆಯಾದರೂ ಸಹ ಕೇವಲ ಅಭಿವೃದ್ದೀ ಹೊಂದಿದ ಪ್ರದೇಶಗಳಿಗೆ ಬಳಕೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಈ ಪ್ರದೇಶದ ಜನಪ್ರತಿನಿಧಿಗಳು ಜನರ ಮತ ಪಡೆದು ಆಯ್ಕೆಯಾಗಿ ಅಂಧಕಾರದಲ್ಲಿ ಮುಳುಗಿದ್ದಾರೆ, ಮತ್ತು ನಗರ ಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಾಸಕರು, ಸ್ಲಂ ಪ್ರದೇಶಗಳಿಗೆ ಮಲತಾಯಿ ಧೋರಣೆ ತೋರುತ್ತಿರುವುದನ್ನು ಕರವೇ ಬಲವಾಗಿ ಖಂಡಿಸುತ್ತೇವೆ. 
ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ ಬ್ಯಾಹಟ್ಟಿ ಮಾತನಾಡಿ ಸ್ಲಂ ಪ್ರದೆಶಗಳಿಗೆ ನಗರ ಸಭೆಗೆ ಸಂಬಂಧಿಸಿದ ಆಸ್ತಿಯನ್ನು ಕೆಲವರು ಅತೀಕ್ರಮಣ ಮಾಡಿಕೊಂಡು ಆಕ್ರಮ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೂ ಸಹ ನಗರ ಸಭೆ ಹಾಗೂ ಆಡಳಿತ ಮಂಡಳಿಯು ನೋಡಿಯೂ ಹಾಗೇ ನಿದ್ರಾವಸ್ಥೆಯಲ್ಲಿ ಕುಳಿತಿದೆ. ಈ ಮೇಲ್ಕಾಣಿಸಿದ ಸ್ಲಂ ಪ್ರದೇಶಗಳಿಗೆ ವಾರಕೊಮ್ಮ ನೀರು ಸರಬರಾಜು ಮಾಡುತ್ತಿರುವುದು ಬೇಸಿಗೆ ಇರುವುದರಿಂದ ಈ ಪ್ರದೇಶದ ಜನರು ಬಯಪಡುವಂತಾಗಿದೆ ಈ ಕೋಡಲೇ ಎರಡೂ ದಿನಕೊಮ್ಮೆಯಾದರೂ ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕು ಹಾಗೂ ಸ್ಲಂ ಪ್ರದೇಶಗಳಿಗೆ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಇಲ್ಲವಾದರೆ ಕರವೇ ಕೊಪ್ಪಳ ತಾಲೂಕ ಘಟಕದ ಬೀದಿಗಿಳಿದು ವಾರ್ಡನ ನಿವಾಸಿಗಳೊಂದಿಗೆ ಉಗ್ರವಾದ ಪ್ರತಿಭಟನೆಗೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.  
ಈ ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾಉಪಾಧ್ಯಕ್ಷ ಪ್ರವೀಣ ಬ್ಯಾಹಟಿ, ಮಲ್ಲಪ್ಪ ವಾರದ, ನೂರಪಾಷಾ ಕವಲೂರು, ಚಿದಾನಂದ ಗುಡಿಸಲಮನಿ, ಮಂಜುನಾಥ ಬೆಲ್ಲದ್, ಲಿಂಗರಾಜ ಮೂಗಿನ್, ಕಳಕಪ್ಪ ಗೆಜ್ಜಿ, ಶಶಿ ಬೀಡನಾಳ, ಬಸವರಾಜ ಅಬ್ಬಿಗೇರಿ, ತುಳಜಪ್ಪ ಪವಾರ, ಕಾಸೀಂ ಸಾಬ್ ಕಾಯಿಗಡ್ಡಿ, ಶಿವಕುಮಾರ, ಮಹೇಶ ಬನ್ನಿಕೊಪ್ಪ, ಆನಂದ ಎಲಿಗಾರ, ನಿಂಗರಾಜ ಮೂಗಿನ್, ಮಾರುತಿ ಕುರಿ, ಮಂಜುನಾಥ ಯಲಬುರ್ಗಾ, ರಾಜಮ್ಮ ಓಜನಹಳ್ಳಿ, ಜಾನಕಿ ಪತ್ತಾರ, ರತ್ನವ್ವ ಮಾಳಗಿ, ದೇವಮ್ಮ ವಾಲ್ಮೀಕಿ, ಫರಿದಾಬೇಗಂ, ಆಶ್ವಿನಿ ಪಾಸ್ತೆ ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave a Reply

Top