You are here
Home > Koppal News > ಹನುಮಂತಪ್ಪ ಅಂಡಗಿಗೆ ‘ಅನ್ಮೊಲ್ ರತ್ನ’ ಪ್ರಶಸ್ತಿ ಪ್ರದಾನ.

ಹನುಮಂತಪ್ಪ ಅಂಡಗಿಗೆ ‘ಅನ್ಮೊಲ್ ರತ್ನ’ ಪ್ರಶಸ್ತಿ ಪ್ರದಾನ.

ಕೊಪ್ಪಳ-27- ಅನ್ಮೋಲ್ ಟೈಮ್ಸ್ ಕನ್ನಡ ಹಾಗೂ ಇಂಗ್ಲೀಷ ದಿನ ಪತ್ರಿಕೆಯ ವಾರ್ಷಿಕೋತ್ಸವದ ನೆನಪಿಗಾಗಿ ಅನ್ಮೋಲ್ ಜೀಯಾ ಟ್ರಸ್ಟ್ ವತಿಯಿಂದ ಅನ್ಮೋಲ್ ಉತ್ಸವ -೨೦೧೫ ಅಂಗವಾಗಿ ಅಕ್ಟೋಬರ್ ೨೧ ರಂದು ಹೊಸಪೇಟೆಯ ಸೆಕ್ರೇಡ್ ಹಾರ್ಟ ಚರ್ಚನ ಫಂಕ್ಷನ್ ಹಾಲ್‌ನಲ್ಲಿ ಅನ್ಮೋಲ್ ಟೈಮ್ಸ್ ಪತ್ರಿಕೆಯ ಸಂಪಾದಕರಾದ ಎಂ.ಎ.ವಲಿಸಾಹೇಬ್ (ಹಕೀಂಸಾಹೇಬ್) ಅವರು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಇವರಿಗೆ ‘ಅನ್ಮೊಲ್ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.  ಕೊಪ್ಪಳದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಚೈತನ್ಯಾನಂದ ಸ್ವಾಮೀಜಿಗಳು, ಕುಕನೂರಿನ ಹಿರಿಯ ಸಾಹಿತಗಳಾದ ಡಾ. ಕೆ. ಬಿ. ಬ್ಯಾಳಿ, ಗಂಗಾವತಿ ಎ.ಪಿ.ಎಂ.ಸಿ ಯ ಕಾರ್ಯದರ್ಶಿಗಳಾದ ಶರಶ್ಚಂದ್ರ ರಾನಡೆ, ಕೊಪ್ಪಳದ ಸರ್ಧಾರ ವಲ್ಲಭಭಾಯಿ ಪಟೇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಸವರಾಜ ಹನಸಿ, ಹಿರಿಯ ಪತ್ರಕರ್ತರಾದ ನಾಗರಾಜ ಇಂಗಳಗಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   

Leave a Reply

Top