fbpx

ಜನಮನ ಸೂರೆಗೊಂಡ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ.

ಕೊಪ್ಪಳ – ಜಿಲ್ಲೆಯ ಬನ್ನಿಕೊಪ್ಪ ಗ್ರಾಮದಲ್ಲಿ ಶ್ರೀ ಜಗಜ್ಯೋತಿಬಸವೇಶ್ವರ ನಾಟಕ ಯಶಸ್ವಿ ಪ್ರದರ್ಶನ ಗೊಂಡು ನೆರೆದ ಜನರ ಮನಸನ್ನು ಸೂರೆಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯ ಅಡಿಯಲ್ಲಿ ನಾಟಕಾಲಂಕಾರ ದಿ|| ಗರುಡಸದಾಶಿವರಾಯರ ನಾಟ್ಯಸಂಘ ಕವಲೂರ ವತಿಯಿಂದ ಆಯೋಜಿಸಿದ್ದ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು.
    ಈ ಸಂದರ್ಬದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಮ.ನ.ಪ್ರ..ಸ್ವ ಚಿದಾನಮದ ಮಹಾಸ್ವಾಮಿಗಳು ಕಪ್ಪತಮಠ ಹಿರೇಸಿಂದೋಗಿ ಹಾಗೂ ಶ್ರೀ ಚನ್ನವೀರ ಮಹಾಸ್ವಾಮಿಗಳು ಲಿಂಗನಾಯಕನಹಳ್ಳಿ ಮತ್ತು ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೈನಳ್ಳಿ, ವಹಿಸಿದ್ದರು. ವೇದಿಕೆಮೇಲೆ ಮಾಜಿ ಜಿ.ಪಂ ಉಪಾಧ್ಯಕ್ಷ ವೆಂಕಣ್ಣ ಶಿ. ದೊಡ್ಡಯರಾಶಿ, ಗ್ರಾ.ಪ ಅಧ್ಯಕ್ಷೆ ಉಮಾದೇವಿ ಶಿವಪ್ಪ ಮಾಳೆಕೊಪ್ಪ,  ವಿ.ಎಸ್.ಎಸ್.ಎನ್ ನ ಅಧ್ಯಕ್ಷ ಸಿದ್ದಪ್ಪ ಲಿಂಗಬಸಪ್ಪ ಮಾಳೆಕೊಪ್ಪ, ದಳಪತಿ ಟಿ.ಎ.ಪಾಟೀಲ, ಹಾಗೂ ಗ್ರಾಮದ ಗಣ್ಯರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.  ಈ ನಾಟಕವು ಹಿರೇಸಿಂದೋಗಿ ಶ್ರೀ ಚನ್ನಬಸವೇಶ್ವರ ಶಾಖಾಮಠದ ೭ ನೇ ರಥೋತ್ಸವದ ಅಂಗವಾಗಿ ಉಚಿತ ಪ್ರದರ್ಶನಗೊಂಡಿದ್ದು ಕವಲೂರಿನ ರಂಗಭೂಮಿ ಕಲಾವಿದರಾದ ಬಸವರಾಜ ಹೆಸರೂರ ಅವರ ಪರಿಕಲ್ಪನೆ ನಿರ್ಧೇಶನದಲ್ಲಿ ಅನುಭವಿ ಕಲಾವಿದರನ್ನೊಳಗೊಂಡ ನಾಟಕ ಕಲಾಭಿಮಾನಿಗಳನ್ನು ತಣಿಸಿತು.

Please follow and like us:
error

Leave a Reply

error: Content is protected !!