ದತ್ತಾಂಶ ನಿರ್ವಾಹಕರ ಹುದ್ದೆ ನೇಮಕಾತಿ : ಅರ್ಜಿ ಆಹ್ವಾನ

 ಕೊಪ್ಪಳ ನಗರದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕಾರ್ಯಕ್ರಮಗಳ ಅರಿವು ಮೂಡಿಸುವ ಮಾಹಿತಿ ಕೇಂದ್ರದ ನಿರ್ವಹಣೆಗಾಗಿ ಹೊರ ಸಂಪನ್ಮೂಲಕ ಮುಖಾಂತರ ಒಬ್ಬರು ದತ್ತಾಂಶ ನಿರ್ವಾಹಕರ ಹುದ್ದೆಯನ್ನು ನೇಮಕಾತಿ ಮಾಡಲು ಉದ್ದೇಶಿಸಲಾಗಿದ್ದು, ಅರ್ಜಿ ಆಹ್ವಾನಿಸಲಾಗಿದೆ.
  ಅಭ್ಯರ್ಥಿಯು ಬಿ.ಸಿ.ಎ. ವಿದ್ಯಾರ್ಹತೆ ಹೊಂದಿದ್ದು, ಕನ್ನಡ, ಇಂಗ್ಲೀಷ್ ಮತ್ತು ಉರ್ದು ಓದುವ-ಬರೆಯುವ ಜ್ಞಾನ ಹೊಂದಿರಬೇಕು.  ಈ ಹುದ್ದೆಯನ್ನು ಹೊರಸಂಪನ್ಮೂಲ ಸಂಸ್ಥೆಯ ಮೂಲಕ ಪ್ರತಿ ಮಾಹೆಗೆ ೧೨೦೦೦ ರೂ. ಗಳ ಗೌರವ ಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುವುದು.  ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ತಮ್ಮ ಬಯೋಡಾಟಾವನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಜ. ೧೬ ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ಜಿಲ್ಲಾ ಬಿ.ಸಿ.ಎಂ. ಇಲಾಖೆಯ ಕಚೇರಿಯಿಂದ ಪಡೆಯಬಹುದಾಗಿದೆ .

Leave a Reply