ಯುವ ಬರಹಗಾರರ ಹಸ್ತ ಪ್ರತಿ ಮುದ್ರಣಕ್ಕೆ ಸಹಾಯಧನ : ಅರ್ಜಿ ಆಹ್ವಾನ

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ೨೦೧೨-೧೩ನೇ ಸಾಲಿನಲ್ಲಿ ಪ್ರಕಟವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಎಂಪಿಎಲ್ ಪ್ರೌಢಪ್ರಬಂಧ ಮತ್ತು ಪಿಎಚ್‌ಡಿ ಪದವಿ ಪಡೆದ ಮಹಾ ಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕಾಗಿ   ಧನ ಸಹಾಯ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
  ಮುದ್ರಣಕ್ಕೆ ಇಲಾಖೆಯಿಂದ ೨೫೦೦೦ ರೂ. ಗಳ ಧನ ಸಹಾಯ ನೀಡಲಾಗುವುದು.  ಪ್ರಬಂಧದ ೧೦೦೦ ಪ್ರತಿಗಳ ಮುದ್ರಣಕ್ಕೆ ತಗಲುವ ಅಂದಾಜು ವೆಚ್ಚದ ದರಪಟ್ಟಿಯನ್ನು ಮುದ್ರಣಾಲಯದಿಂದ ಪಡೆದು, ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು.  ನಿಗದಿತ ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ ಇವರಿಂದ ಪಡದು, ಭರ್ತಿ ಮಾಡಿದ ಅರ್ಜಿಯನ್ನು ಅ. ೨೧ ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
Please follow and like us:
error