ಶಾಲೆಗಳು ಸಮಾಜಮುಖಿ ಶಿಕ್ಷಣ ಕೊಡಬೇಕು- ಕುಂ.ವೀರಭದ್ರಪ್ಪ.

ಕೊಪ್ಪಳ -27- ಕೊಪ್ಪಳ ಜಿಲ್ಲೆ ಹಿಂದೂ ಮುಸ್ಲಿಂ ಸಾಮರಸ್ಯದ ಸಂಕೇತ. ಈ ಭಾಗದಲ್ಲಿ ಶಿಕ್ಷಣ ಗಣನೀಯವವಾಗಿ ಹಿಂದುಳಿದಿದೆ. ಇಂತಹ ನಗರದಲ್ಲಿ ಎಲ್ಲರಿಗೂ ಮಾದರಿಯಾಗುವಂತಹ ಸರಸ್ವತಿ ವಿದ್ಯಾಮಂದಿರದ ಶಿಕ್ಷಣ ಸಂಸ್ಥೆಯ ಸೇವೆ ಶ್ಲಾಘನೀಯ. ನಮ್ಮ ಶಾಲೆಗಳಲ್ಲಿ ಸಮಾಜಮುಖಿ ಶಿಕ್ಷಣ ನೀಡಬೇಕು. ಸಂಬಂಧಗಳಿಗೆ ಬೆಲೆ ಕೊಡುವಂತಾಗಬೇಕು ಎಂದು ಹಿರಿಯ ಲೇಖಕ ಕುಂ.ವೀರಭದ್ರಪ್ಪ ಹೇಳಿದರು. ನಗರದ ಬಹಾದ್ದೂರ ಬಂಡಿ ರಸ್ತೆಯಲ್ಲಿ ಸರಸ್ವತಿ ವಿದ್ಯಾಮಂದಿರದ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು    ನೆಲಮೂಲದ ಮತ್ತ ಜ್ಞಾನ ಪರಂಪರೆಗಳ ಪರಿಚಯ ಮೂಡಿಸುವುದರ ಮೂಲಕ ಶಿಕ್ಷಣ
ಕಲಿಸಿದರೆ ರಚನಾತ್ಮಕ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ಶಾಲೆಗಳಲ್ಲಿ ಶ್ರಮದ
ಬೆಲೆ ತಿಳಿಸುವಂತಾಗಬೇಕು. ಶ್ರಮಜೀವಿಗಳ ಕೇಂದ್ರವಾಗಬೇಕು. ತಂದೆ ತಾಯಿಗಳನ್ನು ,
ಸಂಬಂಧಗಳನ್ನು  ಪ್ರೀತಿಸುವುದನ್ನು ಕಲಿಸಬೇಕು. ಮನುಷ್ಯ ಮನುಷ್ಯನನ್ನು
ಪ್ರೀತಿಸುವುದನ್ನು ಶಿಕ್ಷಕರು ಹೇಳಿಕೊಡಬೇಕು. ಪುಸ್ತಕದಲ್ಲಿ ಯಾವುದನ್ನು ಹೇಳಲಾಗಿಲ್ಲವೋ
ಅದನ್ನು ಮಕ್ಕಳಿಗೆ ಹೇಳಿಕೊಡಬೇಕು ಆ ಮೂಲಕ ಸದೃಡ ಸಮಾಜ ಕಟ್ಟಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ
ಜಿಲ್ಲಾ ಪಂಚಾಯತ್ ಸದಸ್ಯರಾದ ಗವಿಸಿದ್ದಪ್ಪ ಕರಡಿ, ಗ್ರಾಮ  ಪಂಚಾಯತ್ ಅಧ್ಯಕ್ಷ 
ಹನುಮಪ್ಪ ಹರಿಜನ, ಉಪಾಧ್ಯಕ್ಷೆ ಕಾಸಿಂಬಿ ಬನ್ನಿಕೊಪ್ಪ, ನಗರಸಭಾ ಸದಸ್ಯರಾದ ಶರಣಪ್ಪ
ಚಂದನಕಟ್ಟಿ, ಗಣ್ಯರಾದ ಮುದಿಯಪ್ಪ ಕವಲೂರ, ಚಾಂದಪಾಷಾ ಕಿಲ್ಲೇದಾರ,  ಎಚ್.ಶರಿಪುದ್ದೀನ್,
ಪತ್ರೆಪ್ಪ ಪಲ್ಲೇದ್, ವಿಜಯಕುಮಾರ ಕವಲೂರ, ಕಾಸಿಂಅಲಿ ಉಡೇದ್, ಜೆಇ ಎಸ್.ಡಿ.ನಾಗೋಡ್,
ಶೇಷನ್ ಕುಮಾರ್ ಭೋವಿ,ಹನುಮಂತಪ್ಪ ಬೀಡನಾಳ ಭಾಗವಹಿಸಿದ್ದರು. ಸಾನಿಧ್ಯವನ್ನು ಗೋನವಾರ
ಶ್ರೀಕ್ಷೇತ್ರದ ಶ್ರೀ ಅಬ್ಬಾಸಅಲಿ ತಾತನವರು ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ
ಗಣ್ಯರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಸಂಸ್ಥೇಯ ಕಾರ್ಯದರ್ಶಿ
ಆರ್.ಎಚ್.ಅತ್ತನೂರ ಮಾತನಾಡಿದರು.  ಕಾರ್‍ಯಕ್ರಮಕ್ಕೆ ಸ್ವಾಗತವನ್ನು ಜಿ.ಎಸ್.ಗೌಡರು ,
ನಿರೂಪಣೆ ಆಶಾ ದೊಡ್ಡಮನಿ, ವಂದನಾರ್ಪಣೆಯನ್ನು ಮುಖ್ಯೋಪಾಧ್ಯಾಯನಿ ರೇಣುಕಾ ಅತ್ತನೂರ
ಮಾಡಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್‍ಯಕ್ರಮಗಳು ಜರುಗಿದವು. ನೂರಾರು
ಸಂಖ್ಯೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

Please follow and like us:
error