ಕೊಪ್ಪಳದಲ್ಲಿ ರಕ್ತ ಶೇಖರಣಾ ಘಟಕ ಪ್ರಾರಂಭ

ಕೊಪ್ಪಳ ಸೆ. ೧೯ : ಕೊಪ್ಪಳದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ರೆಡ್‌ಕ್ರಾಸ್ ಸಂಸ್ಥೆಯ ಕಟ್ಟಡದಲ್ಲಿ ನೂತನವಾಗಿ ರಕ್ತ ಶೇಖರಣಾ ಘಟಕವನ್ನು ಸೆ. ೧೯ ರಂದು ಸೋಮವಾರ ಪ್ರಾರಂಭಿಸಲಾಯಿತು.
  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಕೆ.ಜಿ. ಕುಲಕರ್ಣಿ ಅವರು ನೂತನವಾಗಿ ಪ್ರಾರಂಭಿಸಲಾದ ರಕ್ತ ಶೇಖರಣಾ ಘಟಕದ ಉದ್ಘಾಟನೆ ನೆರವೇರಿಸಿದರು.  ಇದರಿಂದಾಗಿ ರಕ್ತ ಶೇಖರಣಾ ಘಟಕ ಪ್ರಾರಂಭವಾಗಬೇಕು ಎಂಬ ಸಾರ್ವಜನಿಕರು ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.  ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿ.ಬಿ. ಬಸವರಾಜ್ ಸೇರಿದಂತೆ ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . 
Please follow and like us:
error