ಯಶಸ್ವಿ ೧೨೮ನೇ ಕವಿಸಮಯ

ಕೊಪ್ಪಳ : ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೧೨೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ವಾಚನ ಮಾಡಿದ ಕವಿತೆಗಳ ಕುರಿತು ಚರ್ಚೆ ನಡೆಯಿತು.
ಬಸವರಾಜ ಸಂಕನಗೌಡರ- ಬಲಿ, ಹುಡುಗಿಯ ದಾರಿ, ಶರಣಪ್ಪ ದಾನಕೈ- ಬೀರು, ಎ.ಪಿ.ಅಂಗಡಿ- ಸೂರ್‍ಯ ಚಂದಿರ, ಬಿ.ಕೆ.ಹೊಂಗಲ್-ನಮ್ಮೂರು, ಬಸವರಾಜ ವಾರಿ- ಸಾವಿಲ್ಲದ ಸಾವಿ ಸಮೃದ್ಧ ರೈತ, ಈರಪ್ಪ ಮುದ್ಲಾಪೂರ- ಖಾರ, ಸಿರಾಜ್ ಬಿಸರಳ್ಳಿ- ಕನಸುಗಳು, ಮಹೇಶ ಬಳ್ಳಾರಿ – ನನ್ನ ಕಥೆ, ಶಾಂತಾದೇವಿ ಹಿರೇಮಠ- ಆಜಾದ್, ಎನ್.ಜಡೆಯಪ್ಪ- ಗೆಳತಿಯ ಮಾತು, ತುಟಿಯ ರಂಗು, ರಮೇಶ ಬನ್ನಿಕೊಪ್ಪ- ಬೆಳಕಿನ ಬೆನ್ನ ಹತ್ತಿ, ಪುಷ್ಪಲತಾ ಏಳುಬಾವಿ – ಗಜಲ್ ವಾಚನ ಮಾಡಿದರು.
ಬಸವರಾಜ್ ಸಂಕನಗೌಡರ ಸ್ವಾಗತ,ಎನ್.ಜಡೆಯಪ್ಪ ವಂದನಾರ್ಪಣೆ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 
Please follow and like us:
error