You are here
Home > Koppal News > ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಯೋಜನೆ

ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಯೋಜನೆ

: ಅರ್ಜಿ ಆಹ್ವಾನ
  ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ  ೨೦೧೧-೧೨ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿಯನ್ನು ಒದಗಿಸಲಾಗುತ್ತಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
೨೦೧೧-೧೨ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಗೆ ಈ ಹಿಂದೆ ಅರ್ಜಿ ಕರೆಯಲಾಗಿದ್ದು, ಆದರೆ ನಿರೀಕ್ಷೆಯಷ್ಟು ಅರ್ಜಿಗಳು ಬಾರದಿದ್ದರಿಂದ, ಈಗ ಪುನಃ ಅರ್ಜಿ ಆಹ್ವಾನಿಸಲಾಗಿದೆ.  ಈ ಯೋಜನೆಯಡಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ೪. ೧೨ ಲಕ್ಷ ರೂ.ಗಳ ವೆಚ್ಚದಲ್ಲಿ ಟಾಟಾ ಇಂಡಿಕಾ ಎಲ್.ಇ.ವಿ-೨, ಬಿ.ಎಸ್.-೩ ಪ್ರವಾಸಿ ಟ್ಯಾಕ್ಸಿಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.  ೪. ೧೨ ಲಕ್ಷ ರೂ. ಗಳ ವೆಚ್ಚ ಪೈಕಿ ೨ ಲಕ್ಷ ರೂ.ಗಳನ್ನು ಇಲಾಖೆಯು ಸಹಾಯಧನ ರೂಪದಲ್ಲಿ ನೀಡಲಿದೆ.  ಶೇ. ೪೫ ರಷ್ಟು ಅಂದರೆ ೧. ೮೫ ಲಕ್ಷ ರೂ.ಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ಉಳಿದ ರೂ. ೨೭೦೦೬ ಗಳನ್ನು ಫಲಾನುಭವಿ ಭರಿಸಬೇಕಾಗುತ್ತದೆ.  ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ವಯೋಮಿತಿ ೨೦ ರಿಂದ ೪೦ ವರ್ಷದೊಳಗಿರಬೇಕು. ಕನಿಷ್ಟ ೧೦ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಗಳು ಲಘುವಾಹನಾ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್ ಹೊಂದಿರಬೇಕು, ಕುಟುಂಬದಲ್ಲಿ ಯಾರೂ ಖಾಯಂ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇತ್ತೀಚಿನ ಭಾವಚಿತ್ರದೊಂದಿಗೆ ಪಡಿತರ ಚೀಟಿ, ಚುನಾವಣಾ ಗುರುತಿನ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತಹಶೀಲ್ದಾರ/ನಗರಸಭೆಯಿಂದ ಪಡೆದಿರುವ ವಾಸಸ್ಥಳ ಧೃಢೀಕರಣ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸ್ಟೇಷನ್ ರಸ್ತೆ, ಉತ್ತರಾಧಿಮಠದ ಎದುರು, ಕೆ.ಆರ್.ಕೆ.ರೆಸಿಡೆನ್ಸಿ, ಹೊಸಪೇಟೆ- ದೂರವಾಣಿ ಸಂ: ೦೮೩೯೪-೨೨೮೫೩೭ ಇವರಿಂದ ಏ. ೨೫ ರಂದು ಪಡೆದು ಭರ್ತಿಮಾಡಿ ದ್ವಿಪ್ರತಿಯಲ್ಲಿ ಎಲ್ಲಾ ಅಗತ್ಯ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ಮೇ. ೧೦ ರಂದು ಸಂಜೆ ೫ ಗಂಟೆಯೊಳಗೆ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಹೊಸಪೇಟೆ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.  

Leave a Reply

Top