ಉದ್ಯೋಗಾವಕಾಶ: ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಆ. ೩ (ಕ.ವಾ): ಮೈಸೂರಿನ ರಾಮನ್ ಅಂತರರಾಷ್ಟ್ರೀಯ ಮಾಹಿತಿ ತಾಂತ್ರಿಕ ವಿದ್ಯಾಲಯ (ಆರ್.ಐ.ಐ.ಐ.ಟಿ) ಇವರು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣರಾಗಿ ಉದ್ಯೋಗ ಅವಕಾಶ ಸಿಗದಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ ಈ ತರಬೇತಿ ಕಾರ್ಯಕ್ರಮವನ್ನು ತಮ್ಮದಾಗಿಸಿಕೊಳ್ಳಬಹುದು. ಆಯ್ಕೆಗೊಂಡ ವಿದ್ಯಾರ್ಥಿಗಳು ಆರ್.ಐ.ಐ.ಐ.ಟಿ ನಡೆಸುವ ಸರ್ಕಾರಿ ಪ್ರಾಯೋಜಕತ್ವದ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಉದ್ಯೋಗಾವಕಾಶ ಪಡೆಯಬಹುದು. ತರಬೇತಿಯಲ್ಲಿ ಇ ಅಂಡ್ ಸಿ, ಇ ಅಂಡ್ ಇ, ಸಿ.ಎಸ್., ಐ.ಎಸ್, ಮೆಕ್ಯಾನಿಕಲ್, ಇನ್ಸ್‌ಟ್ರುಮೆಂಟೇಶನ್, ಬಯೋಟೆಕ್ನಾಲಜಿ, ಟೆಲಿಕಮ್ಯುನಿಕೇಶನ್ ವಿಷಯಗಳಿವೆ. ಆಸಕ್ತ ಅರ್ಜಿಯನ್ನು ಆರ್.ಐ.ಐ.ಐ.ಟಿ , ೨೬೧, ಕೆಐಎಡಿಬಿ ಲ್ಯಾಂಡ್, ಹೆಬ್ಬಾಳ ಕೈಗಾರಿಕಾ ಪ್ರದೇಶ, ಹೆಬ್ಬಾಳ, ಮೈಸೂರು- ೫೭೦೦೧೮ ಇವರಿಗೆ ಆಗಸ್ಟ್ ೧೦ ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೨೧- ೪೨೪೪೪೪೭, ಮೊಬೈಲ್- ೯೬೮೬೬೮೩೭೫೪, ೯೬೮೬೬೬೯೫೪೬ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Related posts

Leave a Comment