ಮಕ್ಕಳಿಗೆ ಭಾವೈಕ್ಯ,ಸೌಹಾರ್ಧತೆಯ ಶಿಕ್ಷಣ ನೀಡಬೇಕಿದೆ- ಪೆನಗೊಂಡಾ ಶರೀಪ್.

ಕೊಪ್ಪಳ-05- ಭಾವೈಕ್ಯದ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮಕ್ಕಳಿಗೆ ಶಾಲಾ ಹಂತದಲ್ಲಿಯೇ ನೀಡುವಂತಾಗಬೇಕು. ಇದರಿಂದ ಅವರಲ್ಲಿ ಶಾಂತಿ, ಸೌಹಾರ್ಧತೆ ಮತ್ತು ದೇಶಪ್ರೇಮ ಬೆಳೆಸಲು ಸಾಧ್ಯ. ಮುಂದೆ ತಮ್ಮ ಜೀವನದಲ್ಲಿ ಇನ್ಯಾರದೋ ಮಾತು ಕೇಳಿ ದಾರಿ ತಪ್ಪುಹೋಗದಂತೆ ಅವರೇ ನಿರ್ಧಾರ ಕೈಗೊಳ್ಳಬಲ್ಲರು. ಇದನ್ನು ಪಠ್ಯದಲ್ಲೂ ಅಳವಡಿಸಬೇಕು ಮತ್ತು ಸಮಯ ಸಂದರ್ಭ ಬಂದಾಗ ಮಕ್ಕಳಿಗೆ ಇದರ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕು. ಕೇವಲ ವೇದಿಕೆಯ ಮೇಲೆ ಭಾವೈಕ್ಯತೆಯ ಬಗ್ಗೆ ಮಾತನಾಡಿ ಹೋದರೆ ಸಾಲದು, ಅದನ್ನು ಕಾರ್ಯಗತ ಮಾಡಬೇಕು ಹೀಗಾದಾಗ ಸಮೃದ್ಧ ಶಾಂತಿಯುತ, ಸೌಹಾರ್ಧ ಭಾರತ ನಿರ್ಮಾಣ ಸಾಧ್ಯ ಎಂದು ಪೆನಗೊಂಡಾದ ಶರೀಪ್ ಹಜರತ್ ಖ್ವಾಜಾ ಸೈಯದ್ ಷಾಬಾಬಾ ರುಖುಮುದ್ದೀನ್ ಅಹ್ಮದ್ ಹುಸೇನಿ ಹೇಳಿದರು. ಅವರು ನಗರದ ಹಜರತ್ ಮರ್ದಾನೆಗೈಬ್ ಉರುಸ್‌ನಲ್ಲಿ  ಭಾವೈಕ್ಯ ಸಂಗಮ ಕಾರ್‍ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ಇಂತಹ ಉರುಸ್ ಮತ್ತು ಜಾತ್ರೆಗಳಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ಧ ಮೂಡಿಸುವ ಇಂತಹ ಕಾರ್‍ಯಕ್ರಮಗಳು ನಿರಂತವಾಗಿ ನಡೆಯಬೇಕು.  ಮನುಷ್ಯ ಏನನ್ನಾದರೂ ಸೃಷ್ಟಿಸಬಹುದು ನಾಶ ಮಾಡಬಹುದು ಆದರೆ ರಕ್ತವನ್ನು ಸೃಷ್ಟಿಸಲಿಕ್ಕಾಗಿಲ್ಲ. ರಕ್ತ ದಾನ ಮಾಡುವುದರ ಮೂಲಕ ಜೀವ ದಾನ ಮಾಡಲಾಗುತ್ತೆ. ರಕ್ತಕ್ಕೆ ಜಾತಿ ಗೊತ್ತಿಲ್ಲ ಅದಕ್ಕೆ ಗೊತ್ತಿರುವುದು  ಜೀವ ಕೊಡುವ ಕೆಲಸ ಮಾತ್ರ ಹೀಗಾಗಿ ರಕ್ತದಾನದಂತಹ ಶಿಬಿರಗಳನ್ನು ಹಮ್ಮಿಕೊಂಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು. ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ ಕೊಪ್ಪಳ ನಗರಕ್ಕೆ ತನ್ನದೇ ಆದ ಇತಿಹಾಸವಿದೆ. ಒಂದು ಕಡೆ ಗವಿಸಿದ್ದೇಶ್ವರ ಮಠ ಇನ್ನೊಂದು ಕಡೆ ಮರ್ದಾನ ಗೈಬ್ ದರ್ಗಾ ಇವು ನಮ್ಮ ಊರಿನ ಭಾವೈಕ್ಯತೆಯನ್ನು ಸಾರಿ
ಹೇಳುತ್ತವೆ. ಆ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು
ಹೇಳಿದರು. ಕಾರ್‍ಯಕ್ರಮದಲ್ಲಿ ಪಾಸ್ಟರ್ ವಸಂತಕುಮಾರ್, ಡಾ.ವಿ.ಬಿ.ರಡ್ಡೇರ್, ರಾಜಶೇಖರ
ಅಂಗಡಿ, ರಮೇಶ ಪಟ್ಟೇದಾರ, ಮುಪ್ತಿ ನಜೀರ್ ಅಹ್ಮದ್ ಮಾತನಾಡಿದರು. ವೇದಿಕೆಯ ಮೇಲೆ ಸಹಾಯಕ
ಆಯುಕ್ತ ಇಸ್ಮಾಯಿಲ್‌ಸಾಬ ಶಿರಹಟ್ಟಿ , ನಗರಸಭಾ ಸದಸ್ಯರಾದ ಖಾಜಾವಲಿ ಬನ್ನಿಕೊಪ್ಪ,
ಅಮ್ಜದ್ ಪಟೇಲ್, ಮೌಲಾಹುಸೇನ ಜಮೇದಾರ, ಮಾಜಿ ಸದಸ್ಯರಾದ ಕಾಟನ್ ಪಾಷಾ, ಮಾನ್ವಿ ಪಾಷಾ,
ಜಾಕೀರ ಕಿಲ್ಲೇದಾರ್,  ಚಿಕನ್ ಪೀರಾ , ಲಾಯಖ್ ಅಲಿ,ಖತೀಬ್ ಬಾಷಾ, ಸರ್ದಾರ ಗೌಸ್ ಸಾಬ್,
ಇಸ್ಮಾಯಿಲ್ ಕೊತ್ವಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ
ಪ್ರಾಸ್ತಾವಿಕವಾಗಿ ಕೆ.ಎಂ.ಸಯ್ಯದ್ ಮಾತನಾಡಿದರು. ಸ್ವಾಗತ ಮತು ಕಾರ್‍ಯಕ್ರಮದ
ನಿರ್ವಹಣೆಯನ್ನು ಎಚ್.ವಿ.ರಾಜಾಬಕ್ಷಿ ನೆರವೇರಿಸಿದರು. ವಂದನಾರ್ಪಣೆಯನ್ನು ನಿಸಾರ್‌ಸಾಬ
ಮಾಸ್ಟರ್ ಮಾಡಿದರು. ಉರುಸ್ ಕಾರ್‍ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದವರನ್ನು
ಸನ್ಮಾನಿಸಲಾಯಿತು. ನಂತರ ಖವ್ವಾಲಿ ಕಾರ್‍ಯಕ್ರಮ ನಡೆಯಿತು. ನಿರಂತರವಾಗಿ ಅನ್ನಸಂತರ್ಪಣೆ
ಕಾರ್‍ಯಕ್ರಮ ನಡೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

Please follow and like us:
error