ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ವತಿಯಿಂದ ಪ್ರತಿಬಟನೆ.

ಇಂದು ಕೊಪ್ಪಳದಲ್ಲಿ ಸಮರ್ಪಕ ನೀರಿನ ಪೂರೈಕೆಗಾಗಿ ಒತ್ತಾಯಿಸಿ ಮತ್ತು ಶುದ್ದ ನೀರನ್ನು ಒದಗಿಸುವಂತೆ ಎಸ್.ಯು.ಸಿ.ಐ(ಕಮ್ಯುನಿಸ್ಟ) ಪಕ್ಷದ ಸದಸ್ಯರಾದ ಬಿ. ಆರ್. ಉಮೇಶ ಮಾತನಾಡುತ್ತಾ ಕೊಪ್ಪಳ ಜಿಲ್ಲೇಯಾಗಿ ದಶಕಗಳೆ ಕಳೆದರೂ  ಇನ್ನೂ ಸರಿಯಾಗಿ ಜನತೆಗೆ ಶುದ್ದ ಕುಡಿಯುವ ನೀರು ಒದಗಿಸಲಾಗಿಲ್ಲ. ಆನರ ನೀರಿನ ಬವಣೆಯನ್ನು ಹೇಳತೀರದಾಗಿದೆ. ಜೊತೆಗೆ ಸುಮಾರು ೮ ರಿಂದ ೧೦ ದಿವಸದಕ್ಕೆ ಒಮ್ಮೆ ಸರಬರಾಜು ಆಗುತ್ತಿದೆ.   ಮತ್ತು ಸಮಯದ ಪಾಲನೆ ಇಲ್ಲದಂತಾಗಿದೆ. ಪಕ್ಕದ  ೨೫.೧೩೧ ಟಿ.ಎಂ.ಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯವಿದ್ದು ಆ ನೀರನ್ನು ೨೪ ಗಂಟೆಗಳ ಕಾಲ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ  ಬೃಹತ್ತ ಪ್ರಮಾಣದ ನೀರನ್ನು ಹರಿಸಲಾಗುತ್ತದೆ. ಆದರೆ ಇಲ್ಲಿನ ಜನತೆಗೆ ಕನಿಷ್ಠ ಸೌಲಭ್ಯವಾದ ಕುಡಿಯುವ ನೀರು ಇಲ್ಲಿನ ವದಗಿಸದಿಲ್ಲದಿರುವದು  ಸರ್ಕಾರದ ದೋರಣೆಯನ್ನು ಸ್ಪಷ್ಟಪಡಿಸುತ್ತದೆ. ಇನ್ನು ಮುಂದೆಯಾದರು ನಗರ ಸಭೆ ಗಂಭಿರವಾಗಿ ಈ ಸಮಸ್ಯೆ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ನಗರ ಸಭೆಗೆ ಮುತ್ತಿಗೆ ಯಾಕ ಬೇಕ್ಕಾಗುತ್ತೆದೆ ಎಂದು ಹೇಳಿದರು.  ಪ್ರತಿಭಟನೆಯನ್ನು ಉದ್ದೇಶಿಸಿ ಹಿರಿಯ ಬಂಡಾಯ ಸಾಹಿತಿಗಳಾದ ಶ್ರೀ ಅಲ್ಲಮಪ್ರಭು ಬೆಟ್ಟದೂರ ರವರು ಮಾತನಾಡುತ್ತಾ. ನೀರು ಜೀವ ಜಲ ಮುಲಭೂತ ಅವಶ್ಯಕತೆಯಿಲ್ಲಿ ಇದು ಕೂಡಾ ಒಂದು. ಸರ್ಕಾರು ನೀರನ್ನು ಸಮರ್ಪಕ ರೀತಿಯಲಿ ಒದಗಿಸದಿರುವದು ವಿಷಾದನೀಯ. ನಗರದಲ್ಲಿ ನೀರು ಬಿಡುವುದು ಯಾವ ಯಾವ ಏರಿಯಾದಲ್ಲಿ ಯಾವ ಯಾವ ದಿನಾಂಕ ಮತ್ತು ಸಮಯದಂದು ನೀರು ಬರುವದು ಎಂದು ವೇಳಾಪಟ್ಟಿ ನಿಗದಿಯಾಗದಿರು  ವದರಿಂದ ಜನತೆ ನೀರಿಗಾಗಿಯೇ ಕಾಯುತ್ತಾ ಕುಳತಿರಬೇಕಾಗಿದೆ. ಇದರಿಂದ ಉಪಜೀವನದ ಕೆಲಸಕ್ಕೆ ದಕ್ಕೆ ಬರುತಿದೆ. ಪ್ರತಿಭಟನೆಯ ಅಧ್ಯಕ್ಷತೆವಹಿಸಿದ್ದ ಎಸ್.ಯು.ಸಿ.ಐ(ಕಮ್ಯುನಿಸ್ಟ) ಪಕ್ಷದ ಸದಸ್ಯರಾದ ಮಾರುತಿ ಎನ್ ಹೊಸಮನಿಯರು ಮಾತನಾಡುತ್ತಾ. ಕೊಪ್ಪಳದಲ್ಲಿ ನೀರಿನ ಸಮಸ್ಯೆ ಉಲ್ಬಣ ಗೋಂಡಿದ್ದು  ಮತ್ತು ಕಲುಷಿತ ನೀರಿನಿಂದ ರೋಗದ ಭಿತಿಯನ್ನು ಎದುರಿಸಬೇಕಾಗಿದೆ. ಈ ಸಮಸ್ಯೆ ಯನ್ನು ಹೋಗಲಾಡಿಸಲು ಜನತೆ ಒಟ್ಟು ಗುಡಿ ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನಿಡಿದರು. ನಂತರ ನಗರ ಸಭೆಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತ್ತು. ಈ ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ) ಪಕ್ಷದ ಶರಣು ಗಡ್ಡಿ, ರಮೇಶ ವಂಕಲಕುಂಟಿ. ಸಿಧ್ಧಲಿಂಗರೆಡ್ಡಿ ಹಾಗೂ ವಿವಿಧ ಬಡಾವಣೆಗಳಿಂದ ಬಂದ ನಾಗರಿಕರಾದ ಶಂಕ್ರಪ್ಪ, ಯಮನೂರು, ಮುದಕಪ್ಪ, ಶರಣಮ್ಮ, ರಜೀಯಾಬೇಗಂ, ಪ್ಯಾರಿಬೇಗಂ, ಗವಿಸಿದ್ದಮ್ಮ, ಮುಂತಾದವರು ಭಾಗವಹಿಸಿದ್ದರು.

Please follow and like us:

Leave a Reply