ಕರ್ಕಿಹಳ್ಳಿಯಲ್ಲಿ ಕೃಷಿ ವಸ್ತು ಪ್ರದರ್ಶನ.

ಕೊಪ್ಪಳ ಆ. ೦೧ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಕರ್ಕಿಹಳ್ಳಿಯಲ್ಲಿ ಮೌನೇಶ್ವರನ ಜಾತ್ರಾ ಮಹೋತ್ಸವದ ಪ್ರಯುಕ್ತ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಯಿತು.
      ಬೆಳೆಗಳ ವಿವಿದ ತಳಿಗಳು, ಮೌಲ್ಯವರ್ಧಿತ ಪದಾರ್ಥಗಳು, ಜೇನು ಕೃಷಿ, ಸಸ್ಯ ಸಂರಕ್ಷಣಾ ಹಾಗೂ ಇನ್ನಿತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ ಪಾಟೀಲ, ವಿಷಯ ತಜ್ಞ ಯೂಸುಫ್‌ಅಲಿ ನಿಂಬರಗಿ, ರೋಹಿತ್ ಕೆ.ಎ, ಸುಧಾಕರ್ ಟಿ ಮತ್ತು ಸಿಬ್ಬಂದಿಯವರು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.

Please follow and like us:
error