ರಾಜ್ಯಾಧ್ಯಕ್ಷರಾಗಿ ಬೀರಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಕಮಲಾಪುರ ಆಯ್ಕೆ.

ಕೊಪ್ಪಳ-12-  ಎಪ್ರಿಲ್ ೨೦೦೬ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಜಾರಿಗೆ ಮಾಡಿರುವ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕವು ರಚನೆಯಾಗಿದೆ.
ಕೊಪ್ಪಳ ನಗರದ ಸಿ.ಪಿ.ಎಸ್.ಶಾಲೆಯ ಶಿಕ್ಷಕರಾದ ಬೀರಪ್ಪ ಅಂಡಗಿ


ಚಿಲವಾಡಗಿರವರು ರಾಜ್ಯಾಧ್ಯಕ್ಷರಾಗಿ,ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ ಶಾಲೆಯ ಶಿಕ್ಷಕರಾದ ಬಸವರಾಜ ಕಮಲಾಪುರ ಪ್ರಧಾನ ಕಾರ್ಯದರ್ಶಿಯಾಗಿ, ಹುಬ್ಬಳ್ಳಿಯ ರಾಜು ಶೆಲವಡಿ ಉಪಾಧ್ಯಕ್ಷರಾಗಿ,ಬಳ್ಳಾರಿಯ ರಾಘವೇಂದ್ರ.ಬಿ.ಖಜಾಂಚಿಯಾಗಿ,ಕಾರವಾರದ ಶಿವರಾಜ ಪಾಳೆಗಾರ ಮತ್ತು ಮಂಡ್ಯದ ಯೋಗನರಸಿಂಹಗೌಡ ಸಹ ಕಾರ್ಯದರ್ಶಿಯಾಗಿ,ರಾಮನಗರದ ದೀಪು.ಎಂ.ಮತ್ತು ಹಾಸನ ಉಮಾದೇವಿ.ಎಂ.ಸಂಘಟನಾ ಕಾರ್ಯದರ್ಶಿಯಾಗಿ,ಕಲಬುರಗಿಯ ಬಸವರಾಜ ಹೇಳವರ್ ಮತ್ತು ಗದಗಿನ ಎಸ್.ಎಸ್.ಎಲಿಗಾರ ಜಂಟಿ ಕಾರ್ಯದರ್ಶಿಯಾಗಿ, ಕೋಲಾರದ ಯು.ಮಧುಸುಧನ ಮತ್ತು ಯಾದಗಿರಿಯ ಕರಿಯಪ್ಪ ಅಜ್ಜಿ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆಂದು ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.

Please follow and like us:
error