ಕಾನೂನುಬಾಹಿರವಾಗಿ ಪರಭಾರೆಯಾದ ನಿವೇಶನವನ್ನು ಹಿಂದಕ್ಕೆ ಪಡೆಯಲು ,ಅಕ್ರಮ ಒತ್ತುವರಿ ತೆರವಿಗೆ ಆಗ್ರಹ

ಅಗಡಿ ವೀರಣ್ಣ ಕೊಳಚೆ ಪ್ರದೇಶ ಗಂಗಾವತಿ: ೬೦ ಕೋಟಿ ಬೆಲೆ ಬಾಳುವ ಭೂಮಿ ಪರಭಾರೆ ಮಾಡಿದ ನಗರಸಭೆ.   
            ಗಂಗಾವತಿ ಸರ್ವೇ ನಂ.೨೬/೧,೨ ರ ೬ ಎಕರೆ ೩೨ ಗುಂಟೆ ಇದರ ಹಿಂದಿನ ಮಾಲೀಕರು ಆದ ಅಗಡಿ ವೀರಣ್ಣನವರ ಭೂಮಿ ೧೯೭೫ ರಲ್ಲಿ ಕೊಳಚೆ ಪ್ರದೇಶವೆಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಘೋಷಣೆಯಾಗಿದೆ. ಗಂಗಾವತಿಯ ಅಂದಿನ ಪುರಸಭೆ ಮತ್ತು ಈಗಿನ ನಗರ ಸಭೆ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಆಸ್ತಿಯ ರಕ್ಷಣೆಯ ಕಾನೂನುಗಳನ್ನು ಗಾಳಿಗೆ ತೂರಿ ಪರಭಾರೆ ಮಾಡಿದ್ದಾರೆ. ಇದರಲ್ಲಿ ೨ ಎಕರೆ ಪ್ರದೇಶನ್ನು ಚಿತ್ರ ಮಂದಿರ ಹಾಗೂ ಇತರೆ ವಾಣಿಜ್ಯ ಉಪಯೋಗಕ್ಕಾಗಿ ೧೯೮೦ ರ ದಶಕದಲ್ಲಿ ನಗರದ ಪ್ರತಿಷ್ಠಿತ ಯಕ್ತಿಗಳಿಗೆ ಅನಧೀಕೃತವಾಗಿ ಪರಭಾರೆ ಮಾಡಲಾಗಿದೆ. ಪ್ರಸ್ತುತ ೨ ಎಕರೆ ಬೂಮಿ ಕಿಮ್ಮತ್ತು ೨೦ ಕೋಟಿಯಾಗುತ್ತದೆ. ಉಳಿದ ೪.೩೨ ಎಕರೆ ಜಮೀನಿನಲ್ಲಿ ನಗರಸಭೆಯವರು ಬಡಾವಣೆ ವಿನ್ಯಾಸ ರೂಪಿಸಿ ೪೨೦ ಜನ ಫಲಾನುಭವಿಗಳಿಗೆ ನಿವೇಶನ ಹಂಚಿದ್ದಾರೆ. ಈ ಪ್ರದೇಶವನ್ನು ೯ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಉತ್ತರ-ದಕ್ಷಿಣ : ೪೦೦ ಅಡಿ, ಪೂರ್ವ-ಪಶ್ಚಿಮ ೪೦ ಅಡಿ ವಿನ್ಯಾಸ ರೂಪಿಸಲಾಗಿದೆ. ೯ ಬ್ಲಾಕ್‌ಗಳ ಪೈಕಿ ೧ನೇ ಬ್ಲಾಕ್‌ನಲ್ಲಿ ವಾಸವಿರುವ ೧೨ ಜನ ಕುಟುಂಬಗಳನ್ನು ಒಕ್ಕಲೆಬ್ಬಿಸಿದ ಜಾಗವನ್ನು ನಗರದ ಪ್ರತಿಷ್ಠಿತ ವಾಣಿಜ್ಯೋದ್ಯಮಿಗೆ ಅನಧೀಕ್ತವಾಗಿ ವಿತರಿಸಿ, ಇತರ ೨೯ ಜನ ವಾಣಿಜ್ಯೋದ್ಯಮಿಗಳಿಗೆ ಹಂಚಿಕೆ ಮಾಡಿ ಭ್ರಷ್ಠಾಚಾರವೆಸಗಿದ್ದಾರೆ. ಈ ಹಂಚಿಕೆ ಬಗ್ಗೆ ನಗರಸಭೆಯಲ್ಲಿ ಯಾವುದೇ ದಾಖಲೆ ಇಲ್ಲ. ಶಾಸಕರಾದ ಇಕ್ಬಾಲ್ ಅನ್ಸಾರಿ, ನಗರಸಭೆ ಆಯುಕ್ತರು ಇನ್ನೂ ಕೆಲವು ಜನಪ್ರತಿನಿಧಿಗಳು ಈ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆ ಎನ್ನುವುದು ಬಹಿರಂಗವಾಗಿ ಜನ ಮಾತನಾಡಿಕೊಳ್ಳುವಂತಾಗಿದೆ. 
             ಜಿಲ್ಲಾಧಿಕಾರಿಗಳಿಗೆ ಇಂದು ನಿಯೋಗದ ಮೂಲಕ ಮನವಿ ನೀಡಿ ಕೂಡಲೇ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಕೊಳಚೆ ಪ್ರದೇಶದ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬಾಹಿರವಾಗಿ ಪರಭಾರೆಯಾದ ನವೇಶನವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಈಗಾಗಲೇ ವಾಸವಾಗಿದ್ದ,

ಈಗ ಹೊರ ಹಾಕಲಾದ ೧೨ ಕುಟುಂಬಗಳಿಗೆ ನ್ಯಾಯ ಕಡಬೇಕು, ಅಕ್ರಮ ಒತ್ತುವರಿ ತೆರವುಗೊಳಿಸಿ, ೬೦ ಕೋಟಿಯ ಆಸ್ತಿ ರಕ್ಷಣೆ ಮಾಡಬೇಕೆಂದು ನಿಯೋಗದಲ್ಲಿದ್ದ, ಜೆ.ಭಾರಧ್ವಜ್, ಬಸವರಾಜ್ ಶೀಲವಂತರ್, ಕೆ.ಬಿ.ಗೋನಾಳ್, ಹನುಮೇಶ ಕವಿತಾಳ, ಬಸನಗೌಡ ಸೂಳೇಕಲ್ ಒತ್ತಾಯಿಸಿದರು.          

Leave a Reply