fbpx

ನಶಿಸುತ್ತಿರುವ ಕಲೆಗಳಿಗೆ ಪ್ರೋತ್ಸಾಹ ಅಗತ್ಯ- ಹೊನ್ನೂರಸಾಬ್

 

ಜಾನಪದ ಹಾಗೂ ಇತರೆ ಕಲಾ ಪ್ರಕಾರಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ ಎಂದು ಭಾಗ್ಯನಗರ ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ್ ಅವರು ಹೇಳಿದರು.

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಏರ್ಪಡಿಸಿದ ’ಗಿರಿಜನ ಉತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಾನಪದ ಹಾಗೂ ಹಲವು ಕಲಾ ಪ್ರಕಾರಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಅವುಗಳಲ್ಲಿ ಬಹುಪಾಲ ನಶಿಸಿ ಹೋಗುವ ಆತಂಕವಿದೆ.  ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಲು, ಕಲೆಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ.  ಕಲೆಗಳ ಪ್ರೋತ್ಸಾಹ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿಜನ ಉತ್ಸವದಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಲೆ ಮತ್ತು ಕಲಾವಿದರ ನೆರವಿಗೆ ಬಂದಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ್ ಅವರು ಹೇಳಿದರು.
  ತಾಲೂಕಾ ಪಂಚಾಯತಿ ಸದಸ್ಯ ದಾನಪ್ಪ ಕವಲೂರ ಅವರು ಮಾತನಾಡಿ, ಸಂಗೀತ, ನೃತ್ಯ, ಲಲಿತ ಕಲೆಗಳಿಂದ ಜೀವನದಲ್ಲಿ ನೆಮ್ಮದಿ ಪಡೆಯಲು ಸಾಧ್ಯ ಎಂದರು.   ಕಲಾವಿದರುಗಳಾದ ಬಸಪ್ಪ ಚೌಡ್ಕಿ ತೆಗ್ಗಿಹಾಳ, ಶರಣಪ್ಪ ವಡಗೇರಿ, ಸದಾಶಿವ ಪಾಟೀಲ್, ರಾಮಚಂದ್ರಪ್ಪ ಉಪ್ಪಾರ, ಪಿಡಿಓ ಜಂಬಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಸಿವಿ ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.  ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗ್ಯನಗರದ ನಾಗರಾಜ ಶ್ಯಾವಿ ಅವರಿಂದ ಕೊಳಲು ವಾದನ, ರಿದಂ ಡ್ಯಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ಪ್ರದರ್ಶನ, ಕುಷ್ಟಗಿ ಗ್ಯಾನಪ್ಪ ತಳವಾರ ಅವರಿಂದ ಜಾನಪದ ಗೀತೆಗಳು, ಬಸಪ್ಪ ಚೌಡ್ಕಿ ತೆಗ್ಗಿಹಾಳ ಅವರಿಂದ ಚೌಡ್ಕಿ ಪದಗಳು, ಯಲಬುರ್ಗಾದ ಮಾನಪ್ಪ ವಜ್ರಬಂಡಿ ಅವರಿಂದ ರಂಗ ಗೀತೆಗಳು, ರಂಜಿತ ಲಕಮಾಪುರ ರಿಂದ ಭರತನಾಟ್ಯ, ನಾಗರಾಳದ ಬಸವರಾಜ ಗಂಗನಾಳ ಅವರಿಂದ ಬಯಲಾಟ ಪದಗಳು, ಯರೇಹಂಚಿನಾಳದ ಹನುಮಂತ ನರೇಗಲ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಕೊಡತಗೇರಿಯ ಭೀಮಪ್ಪ ಪೂಜಾರ ಅವರಿಂದ ತತ್ವಪದಗಳು, ಬಸವರಾಜ ಬಿನ್ನಾಳ ರಿಂದ ವಚನಗಾಯನ, ನಾಗರಾಜ್ ರಿಂದ ಸುಗಮ ಸಂಗೀತ ಮತ್ತು ಗಂಗಾವತಿ ಗೋಪಾಲನಾಯಕ ನವಲಿ ಅವರು ಭಜನೆ ಪದಗಳನ್ನು ಪ್ರಸ್ತುತಪಡಿಸಿದರು.
Please follow and like us:
error

Leave a Reply

error: Content is protected !!