ಜಾತಿ ಗಣತಿಯಲ್ಲಿ ಬಲಿಜ ಎಂದು ನಮೂದಿಸಿ -ಡಿ.ವೆಂಕಟೇಶ್.

 ಹೊಸಪೇಟೆ: ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಲಿಜ ಸಮಾಜ ಬಂಧುಗಳು ಜಾತಿ ಗಣತಿಯ ಜಾತಿ ಕಾಲಂನಲ್ಲಿ ಬಲಿಜ ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಬಲಿಜ ಸಂಯುಕ್ತ ಸಂಘ(ರಿ)ದ ಸಂಘಟನಾ ಕಾರ್ಯದರ್ಶಿ ಡಿ.ವೆಂಕಟೇಶ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತಿ ಸಂಖ್ಯಾ ಬಲದ ಆಧಾರದ ಮೇಲೆ ಸರ್ಕಾರ ಮೀಸಲಾತಿ ಸೇರಿದಂತೆ ಇತರ ಯೋಜನೆ ರೂಪಿಸಲು ಜಾತಿ ಸಂಖ್ಯಾಬಲ ಆಧಾರವಾಗುತ್ತದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಜ ಸಾಮಾಜಿಕ ಸಮಾನತೆಗಾಗಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಬಲಿಜ ಬಾಂಧವರು ಬಲಿಜ ಜಾತಿ ಎಂಬ ನಿಖರ ಮಾಹಿತಿ ನೀಡಬೇಕು. ರಾಜ್ಯದಲ್ಲಿ ದಶ ವಾರ್ಷಿಕ ಜಾತಿವಾರು ಸಮೀಕ್ಷೆ ೧೯೩೧ವರೆಗೆ ಮಾತ್ರ ನಡೆದಿದ್ದು ತದನಂತರ ಜಾತಿ ಸಮೀಕ್ಷೆಗಳು ನಡೆದಿಲ್ಲ. ರಾಜ್ಯದಲ್ಲಿ ಇಂದು ಸುಮಾರು ೪೦ ರಿಂದ ೪೫ ಲಕ್ಷ ಜನಸಂಖ್ಯೆಯಲ್ಲಿ ಬಲಿಜಿಗರು ಇದ್ದಾರೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಜಾತಿ ಸಂಖ್ಯಾಬಲ ಅತ್ಯವಶ್ಯವಾಗಿದೆ. ಬಲಿಜ ಬಾಂಧವರು ಸಂಘಟಿತರಾಗಿ ಜಾತಿ ಕಾಲಂನಲ್ಲಿ ಬಲಿಜ ಎಂದು ನಮೂದಿಸುವುದರಿಂದ ಸರ್ಕಾರದ ಸೌಲಭ್ಯಗಳು ಮತ್ತು ಉದ್ಯೋಗವಾಕಶಗಳ ಮೀಸಲಾತಿಯನ್ನು ಪಡೆಯಬಹುದಾಗಿದೆ. ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸ್ಥಳೀಯ ಬಲಿಜ ಮುಖಂಡರು ಜನಗಣತಿಯ ಬಗ್ಗೆ ತಿಳುವಳಿಕೆ ನೀಡಿ ಜಾತಿಗಣಿತಿಯ ಸದಾವಕಾಶವನ್ನು ಬಳಸಿಕೊಂಡು ಸಂಖ್ಯಾಬಲವನ್ನು ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ.
Please follow and like us:

Related posts

Leave a Comment