fbpx

ಹುಲಿಗೆಮ್ಮ ದೇವಿ ಜಾತ್ರೆ : ಪ್ರಾಣಿ ಬಲಿ ನಿಷೇಧ ಜಾರಿ

 ಕೊಪ್ಪಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ  ಜಾತ್ರಾ ಮಹೋತ್ಸವವು ಮೇ ೧೫ ರವರೆಗೆ ನಡೆಯಲಿದ್ದು, ಜಾತ್ರಾ ಆವರಣದೊಳಗೆ ಅಥವಾ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ. 
  ಕರ್ನಾಟಕ ಪ್ರಾಣಿ ನಿಷೇಧ ಕಾಯ್ದೆ ೧೯೫೯ ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳ ಪ್ರಕಾರ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ.  ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ೧೯೭೩ರ ಸಿ.ಆರ್.ಪಿ ಸೆಕ್ಷನ್ ೧೪೪(೧) ಮತ್ತು (೩)ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೇ. ೧೫ ರವರೆಗೆ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದು, ಕುರಿ, ಆಡು, ಕೋಳಿ ಇತ್ಯಾದಿ ಪ್ರಾಣಿಗಳನ್ನು ತೆಗೆದುಕೊಂಡು ಬರುವುದನ್ನು ಮತ್ತು ಮಾರಕಾಸ್ತ್ರಗಳನ್ನು ತರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ. 
Please follow and like us:
error

Leave a Reply

error: Content is protected !!