ಹಂಪಿ ವಿರೂಪಾಕ್ಷೇಶ್ವರಸ್ವಾಮಿಯ ವಿಶೇಷ ಮಹೋತ್ಸವ

ಕೊಪ್ಪಳ ನ.  : ಹೊಸಪೇಟೆ ತಾಲೂಕ ಹಂಪಿ ಕ್ಷೇತ್ರದಲ್ಲಿ ಡಿ.೧೦ ರಂದು ಶ್ರೀ ವಿರೂಪಾಕ್ಷೇಶ್ವರ ತೆಪ್ಪೋತ್ಸವ ಹಾಗೂ ಡಿ. ೧೨ ರಂದು ಫಲಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ.
ಶ್ರೀ ವಿರೂಪಾಕ್ಷಸ್ವಾಮಿಯ ಫಲಪೂಜಾ ಮಹೋತ್ಸವದ ಅಂಗವಾಗಿ ಡಿ. ೧೦ ರಂದು ಶನಿವಾರ ರಾತ್ರಿ ೧೧ ಗಂಟೆಗೆ ಶ್ರೀ ಮನ್ಮುಖ ತೀರ್ಥದಲ್ಲಿ ವಿರೂಪಾಕ್ಷಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಶ್ರೀ ವಿರುಪಾಕ್ಷಸ್ವಾಮಿ ಫಲಪೂಜಾ ಮಹೋತ್ಸವವು ಡಿ. ೧೨ ರಂದು ಸೋಮವಾರ ರಾತ್ರಿ ೧೦ ಗಂಟೆಗೆ ಶ್ರೀ ಚಕ್ರತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ನೆರವೇರಲಿದೆ. ಈ ಸಂದರ್ಭದಲ್ಲಿ ಶ್ರೀ ವಿರೂಪಾಕ್ಷಸ್ವಾಮಿ ಸ್ವಯಂಭೂಲಿಂಗವನ್ನು ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯರು ತಮ್ಮ ಪಟ್ಟಾಭಿಷೇಕದ ಸಮಯದಲ್ಲಿ ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು.    ಭಕ್ತ ಮಹಾಶಯರೆಲ್ಲರೂ ತಮ್ಮ ಬಂಧು ಮಿತ್ರರೊಡನೆ ಶ್ರೀ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಶ್ರೀ ವಿರೂಪಾಕ್ಷೇಶ್ವರಸ್ವಾಮಿಯ ಸಂಪೂರ್ಣಾನುಗ್ರಹಕ್ಕೆ  ಪಾತ್ರರಾಗಬೇಕೆಂದು ಶ್ರೀ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಎಸ್.ಪಿ.ಬಿ. ಮಹೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Koppal Hampi Hospet

Related posts

Leave a Comment