ಕೊಲ್ಲಾಪುರ-ಹೈದ್ರಾಬಾದ್ ರೈಲು ಪುನರಾರಂಭ- ಸಂಸದ ಶಿವರಾಮಗೌಡ

ಕೊಪ್ಪಳ ಜು. : ಕಳೆದ ಜುಲೈ ೨ ರಿಂದ ಸ್ಥಗಿತಗೊಂಡಿದ್ದ ಕೊಲ್ಲಾಪುರ-ಹೈದ್ರಾಬಾದ್ ರೈಲು ಸಂಚಾರವನ್ನು ಜು. ೮ ರಿಂದ ಪುನರಾರಂಭಗೊಳ್ಳಲಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
ಕೊಪ್ಪಳ ಮೂಲಕ ವಾರದಲ್ಲಿ ನಾಲ್ಕು ಬಾರಿ ಕೊಲ್ಲಾಪುರ-ಹೈದ್ರಾಬಾದ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಸಂಖ್ಯೆ ೦೭೧೪೩ ಹಾಗೂ ೦೭೧೪೪ ರೈಲು ಸಂಚಾರವನ್ನು ರೈಲ್ವೆ ಇಲಾಖೆಯು ಕಳೆದ ಜು. ೨ ರಿಂದ ಸ್ಥಗಿತಗೊಳಿಸಿತ್ತು. ರೈಲ್ವೆ ಇಲಾಖೆಗೆ ಈ ಮಾರ್ಗದ ರೈಲು ಸಂಚಾರದ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಲಾಗಿದ್ದು, ರೈಲ್ವೆ ಇಲಾಖೆಯು ಜು. ೮ ರಿಂದ ಕೊಲ್ಲಾಪುರ-ಹೈದ್ರಾಬಾದ್ ರೈಲ್ವೆ ಸೇವೆಯನ್ನು ಪುನರಾರಂಭಿಸಲಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.

Please follow and like us:
error