ವಿವಿಧ ಕ್ಷೇತ್ರದ ಗಣ್ಯರಿಗೆ ಸೇವಾಶ್ರೀ ಪ್ರಶಸ್ತಿ

 ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರಿಗೆ ಸೇವಾ ಸಂಸ್ಥೆ (ರಿ) ಕೊಪ್ಪಳವತಿಯಿಂದ ೨೦೧೩ನೇ ಸಾಲಿನ ಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕಿನ್ನಾಳ ಗ್ರಾಮದಲ್ಲಿ ಸೇವಾ ಸಂಸ್ಥೆಯ ೧೫ನೇ ವಾರ್ಷಿಕೋತ್ಸವ ಹಾಗೂ ಸೇವಾ ವಿದ್ಯಾಲಯದ ೧೦ನೇ ವಾರ್ಷಿಕೋತ್ಸವದ ಕಾರ‍್ಯಕ್ರಮದಲ್ಲಿ  ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 
  ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹದಿನೈದು

ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೇವಾ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತ್ತಿರುವವರನ್ನು ಹಲವಾರು ವರ್ಷಗಳಿಂದ ಗುರುತಿಸಿ ಸನ್ಮಾನ ಮಾಡುತ್ತ ಬಂದಿದೆ. ಈ ಸಾಲಿನಲ್ಲಿ ವಿವಿಧ ಗಣ್ಯರ ಸೇವೆಯನ್ನು ಗುರುತಿಸಿ ಸೇವಾಶ್ರಿ ಪ್ರಶಸ್ತಿಯನ್ನು ನೀಡಲಾಯಿತು.

ಶರಣಪ್ಪ ಬಾಚಲಾಪೂರ (ಪತ್ರಿಕೋದ್ಯಮ ಕ್ಷೇತ್ರ), ನಾಗರಾಜ ಜುಮ್ಮಣ್ಣವರ (ಸಂಘಟನೆ), ಶರಣಪ್ಪ ವಡಗೇರಿ ( ಜಾನಪದ), ರಜಾಕ್ ಉಸ್ತಾದ (ಹೋರಾಟ) , ಶಿವಪ್ಪ ಜೋಗಿ ( ಶಿಕ್ಷಣ ಕ್ಷೇತ್ರ) ಹಾಗೂ ಶ್ರೀ ಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ (ಸಾಮಾಜಿಕ ಸೇವೆ)ಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಅನ್ಮೋಲ್ ಟೈಂಸ್ ಸಂಪಾದಕರಾದ ಎಂ.ಎ.ವಲೀಸಾಹೇಬ , ಹಿರಿಯ ನ್ಯಾಯವಾದಿ,ರಾಜ್ಯ ಬಾರ್ ಕೌನ್ಸಿಲ್ ಸದಸ್ಯೆ ಶ್ರೀಮತಿ ಸಂದ್ಯಾ ಮಾದಿನೂರ, ಡಿಎಸ್ ಎಸ್ ಮುಖಂಡ ಆರತಿ ತಿಪ್ಪಣ್ಣ  ಪ್ರಶಸ್ತಿಗಳನ್ನು  ಪ್ರದಾನ ಮಾಡಿದರು. 

Leave a Reply